ಬಂಟ್ವಾಳ : ಶ್ರೀ ಕೊರ್ದಬ್ಬು ದೈವಸ್ಥಾನ ಕೊಡ್ಮಾಣ್ ಇಲ್ಲಿ ದೈವರಾಜ ಶ್ರೀ ಶ್ರೀ ಕೊರ್ದಬ್ಬು ಹಾಗೂ ಪರಿವಾರ ದೈವಗಳ ವಾರ್ಷಿಕ ನೆಮೋತ್ಸವವು ಮಾ.7 ಹಾಗೂ 8ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ. 29ರಂದು ಆದಿತ್ಯವಾರ ಕೊಡ್ಮಾಣ್ ಶ್ರೀ ಕೊರ್ದಬ್ಬು ಕ್ಷೇತ್ರದಲ್ಲಿ ನಡೆಯಿತು.
ಶ್ರೀ ಕೊರ್ದಬ್ಬು ಸೇವಾ ಸಮಿತಿಯ ಗೌರವಾದ್ಯಕ್ಷರಾದ ಗೋಪಾಲಕೃಷ್ಣ( ಜಿ ಕೆ )ಶೆಟ್ಟಿ ಕೊಡ್ಮಾಣ್ ಬಿಡುಗಡೆ ಮಾಡಿದರು. ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪಾಪೆದಡಿ, ಕಾರ್ಯದರ್ಶಿ ರತನ್ ಕಲ್ಲಜಾಲ್, ಕೋಶಾಧಿಕಾರಿ ಪ್ರವೀಣ್ ಕೋಟ್ಯಾನ್ ಕೊಡ್ಮಾಣ್ , ದೈವಸ್ಥಾನದ
ಪ್ರದಾನ ಅರ್ಚಕರಾದ ಶಿವಪ್ಪ ಕಲ್ಲಜಾಲ್, ಗುರಿಕಾರ ಸಂಜೀವ ಕೋಟ್ಯಾನ್ ಬೆಂಜನಪದವು ಪ್ರಮುಖರಾದ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ಕೆ ಆರ್ ದೇವದಾಸ್ ಕೊಡ್ಮಾಣ್, ಮಹಾಬಲ ಶೆಟ್ಟಿ ಕೊಡ್ಮಾಣ್, ನವೀನ್ ನಾಯ್ಕ್ ಕೊಡ್ಮಾಣ್, ಹರೀಶ್ ಕುಮಾರ್ ಕೊಡ್ಮಾಣ್ ಮತ್ತಿತರರು ಇದ್ದರು.















