ಬಂಟ್ವಾಳ ರೋಟರಿ ಕ್ಲಬ್ ನ ಸಹಕಾರದೊಂದಿಗೆ, ಮಂಗಳೂರಿನ ಎನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯು ಡಿ.3ರಂದು ಆದಿತ್ಯವಾರ ಬಿ ಸಿ ರೋಡ್ ನ ಪ್ರೈವೇಟ್ ಬಸ್ಟ್ ಸ್ಟಾಂಡ್ ಎದುರಿಗೆ, ಫ್ಲೈ ಓವರ್ ಕೆಳಗೆ ಸಂಪೂರ್ಣವಾಗಿ ಲಸಿಕೆಗಳನ್ನು ಕೊಟ್ಟ ಭಾರತೀಯ ತಳಿಯ ನಾಯಿ ಬೆಕ್ಕು ಮರಿಗಳನ್ನು ಉಚಿತವಾಗಿ ದತ್ತು ಕೊಡುತ್ತಿದ್ದಾರೆ.
ಮರಿಗಳನ್ನು ದತ್ತು ಪಡೆಯಲು ಅದಾರ ಪತ್ರ ಕಡ್ಡಾಯ. ಬೆಳಿಗ್ಗೆ ಹತ್ತರಿಂದ ಸಂಜೆ ಐದು ಗಂಟೆಯವರೆಗೆ ಈ ಶಿಭಿರವನ್ನು ನಡೆಸಲಾಗುತ್ತಿದೆ. ಹಣ ಕೊಟ್ಟು ಪ್ರಾಣಿಗಳನ್ನು
ಪಡೆಯುವ ಬದಲು ನಮ್ಮ ರಕ್ಷಿಸಿದ ದೇಸೀಯ ಪ್ರಾಣಿಗಳಿಗೆ ಬದುಕನ್ನು ಕೊಡಬಹುದು ಎಂದು ಬಂಟ್ವಾಳ ರೋಟರಿ ಕ್ಲಬ್ ಮತ್ತು ಎನಿಮಲ್ ಕೇರ್ ಟ್ರಸ್ಟ್ ಪ್ರಕಟಣೆ ತಿಳಿಸಿದೆ















