ಬೊಳ್ಳಾರಿ:ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ, ಪ್ರಕರಣ ದಾಖಲು.

Coastal Bulletin
ಬೊಳ್ಳಾರಿ:ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ, ಪ್ರಕರಣ ದಾಖಲು.

ಬಂಟ್ವಾಳ: ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಚನ್ನಕೇಶವ @ ಕೇಶವ (37) ಎಂಬವರು ಅ.25 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋದವರು ಇದುವರೆಗೆ ಮರಳಿ ಮನೆಗೆ ಬಾರದೆ ಕಾಣೆಯಾದ ಬಗ್ಗೆ ಅವರ ಸಂಬಂದಿ ದೀಕ್ಷಿತ್ ರವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೊಡಾಂಕಾಪುವಿನಲ್ಲಿರುವ ಸೆವೆನ್ ಸ್ಪೈಸಿಸ್ ಇಂಡಿಯಾ ಪ್ರೈ ಲಿ ಕಂಪನಿಯಲ್ಲಿ ಸೆಲ್ಸ್‌ ಮ್ಯಾನ ಆಗಿ ಕೆಲಸ ಮಾಡಿಕೊಂಡಿರುವ ಚನ್ನಕೇಶವ @ ಕೇಶವರು ಎಂದಿನಂತೆ ವಾಹನದಲ್ಲಿ ಚಾಲಕ ಹರಿದಾಸ್‌ ರವರ ಜೊತೆಗೆ ಮಸಾಲೆ ಪದಾರ್ಥಗಳ ಲೈನ್‌ ಕೆಲಸ ಮುಗಿಸಿ ಮದ್ಯಾಹ್ನ 2.30 ಗಂಟೆಗೆ ಪಂಪುವೆಲ್‌ನಲ್ಲಿ ಇಳಿದು ಬೇರೆ ಕೆಲಸ ಮುಗಿಸಿ ಕಂಪೆನಿಗೆ ಬರುವುದಾಗಿ ತಿಳಿಸಿ ಹೋಗಿದ್ದು ನಂತರ ಮದ್ಯಾಹ್ನ 3.30 ಗಂಟೆಗೆ ದೂರುದಾರ ದೀಕ್ಷಿತ್ ರವರ ಅತ್ತಿಗೆಗೆ

ಕರೆ ಮಾಡಿ ತಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದು ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲದ ಕಾರಣ ಸ್ವಿಚ್‌ ಅಪ್ ಆಗುತ್ತದೆ. ನಾಲ್ಕು ದಿನ ಬಿಟ್ಟು ಕರೆ ಮಾಡುವುದಾಗಿ ತಿಳಿಸಿ ಈವರೆಗೆ ಕರೆಯೂ ಮಾಡದೇ ಸಂಬಂಧಿಕರ ಮನೆಗೂ ,ಕಂಪೆನಿಯ ಕೆಲಸಕ್ಕೂ ಹಾಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂದು ದೀಕ್ಷಿತ್ ದೂರಿನಲ್ಲಿ ತಿಳಿಸಿದ್ದಾರೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ( ಮೊ.9535971261) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment