ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಸಂಭ್ರಮಕ್ಕೆ ಚಾಲನೆ. ಹಿಂದೂ ಧರ್ಮ ವಿಶ್ವಕ್ಕೆ ಒಳಿತು ಬಯಸುವ ಧರ್ಮ: ಡಾ ಪ್ರಭಾಕರ ಭಟ್.

Coastal Bulletin
ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಸಂಭ್ರಮಕ್ಕೆ ಚಾಲನೆ. ಹಿಂದೂ ಧರ್ಮ ವಿಶ್ವಕ್ಕೆ ಒಳಿತು ಬಯಸುವ ಧರ್ಮ: ಡಾ ಪ್ರಭಾಕರ ಭಟ್.

ಬಂಟ್ವಾಳ: ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ತುಂಬೆ ಶ್ರೀರಾಮ ನಗರ ರಾಮಲ್ ಕಟ್ಟೆಯಲ್ಲಿ ಕಳೆದ 24ವರ್ಷ ಗಳಿಂದ ಪೂಜಿಸಿಕೊಂಡು ಬರುತ್ತಿರುವ ಶ್ರೀ ಶಾರದಾಪೂಜಾ ಮಹೋತ್ಸವದ ರಜತ ಮಹೋತ್ಸವ ಕ್ಕೆ ಚಾಲನೆಯನ್ನು ಡಾ ಪ್ರಭಾಕರ ಭಟ್ ಕಲ್ಲಡ್ಕ ರವರು ನೆರವೇರಿಸಿ ಮಾತನಾಡಿ ವಿಶ್ವದಲ್ಲಿ ಹಿಂದೂ ಮಾತ್ರ ಇಡೀ ವಿಶ್ವದ ಸರ್ವರಿಗೂ ಮಾತ್ರವಲ್ಲ ಸೃಷ್ಟಿಯ ಎಲ್ಲ ಜೀವರಾಶಿಗಳಿಗೆ ಒಳಿತು ಬಯಸಿ ಪ್ರಾರ್ಥನೆ ಮಾಡುವ ಧರ್ಮ ಶಾಂತಿ ಮತ್ತು ಸೌಹಾರ್ದ ಹಾಗೂ ಉದಾರತೆ ಯನ್ನು ತೋರುವ ಧರ್ಮ ಎಂದರು.

ಧ್ವಜಾರೋಹಣ ವನ್ನು ಶ್ರೀ ಧೂಮ ಮೂಲ್ಯ ಶ್ರೀ ಕನಪಾಡಿ ದೈವದ ಪಾತ್ರಿ ನೆರವೇರಿಸಿದರು ವೇದಿಕೆಯಲ್ಲಿ ಮಜಿಲ ಗಡಿಕಾರ ವಿಶ್ವನಾಥ್ ಅಂಚನ್ ನಿವೃತ್ತ ಅಬಕಾರಿ ಅಧಿಕಾರಿ ಎಂ ಆರ್ ನಾಯರ್ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ

ಪ್ರದಾನ ಸಂಚಾಲಕರು ತಾರಾನಾಥ್ ಕೊಟ್ಟಾರಿ ಅಧ್ಯಕ್ಷರು ರಾಘವ ಬಂಗೇರ ಪೆರ್ಲಬೈಲು ಕಾರ್ಯಧ್ಯಕ್ಷರಾದ ಜಗದೀಶ ಪೂಜಾರಿ, ಕೋಶಾಧಿಕಾರಿ ವಿನೋದ್ ಬೊಳ್ಳರಿ, ಉಪಸ್ಥಿತರಿದ್ದರು

ತಾರಾನಾಥ ಕೊಟ್ಟಾರಿ ಪ್ರಸ್ತಾವಿಕ ಭಾಷಣ ಮಾಡಿದರು ಸಂತೋಷ ಕೋಟ್ಯಾನ್ ಸ್ವಾಗತಿಸಿ ದರು,ರಮಾನಾಥ ಅಮೀನ್ ನಿರೂಪಿಸಿ ವಂದಿಸಿದರು

Leave a Comment