ಕೊನೆರೊಟ್ಟು: ರೋಟರಿ ಕೆಸರುಗದ್ದೆ ಕ್ರೀಡಾಕೂಟ ಕೆಸರುಗದ್ದೆ ಕ್ರೀಡೆ ಆರೋಗ್ಯದಾಯಕ: ಮಹಮ್ಮದ್ ವಳವೂರು.

Coastal Bulletin
ಕೊನೆರೊಟ್ಟು: ರೋಟರಿ ಕೆಸರುಗದ್ದೆ ಕ್ರೀಡಾಕೂಟ ಕೆಸರುಗದ್ದೆ ಕ್ರೀಡೆ ಆರೋಗ್ಯದಾಯಕ: ಮಹಮ್ಮದ್ ವಳವೂರು.

ಬಂಟ್ವಾಳ: ಕೃಷಿ ಪ್ರಧಾನವಾಗಿರುವ ಅವಿಭಜಿತ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಜೊತೆಗೆ ಆರೋಗ್ಯದಾಯಕ ಜೀವನ ನಡೆಸಲು ಕೆಸರುಗದ್ದೆ ಕ್ರೀಡೆಯೂ ಪೂರಕವಾಗಿದೆ ಎಂದು ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಮಹಮ್ಮದ್ ವಳವೂರು ಹೇಳಿದ್ದಾರೆ. ಇಲ್ಲಿನ ಸಿದ್ಧಕಟ್ಟೆ-ಮಾವಿನಕಟ್ಟೆ ನಡುವಿನ ಕೊನೆರೊಟ್ಟು ಗದ್ದೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಮತ್ತು ಮಡಂತ್ಯಾರು ರೋಟರಿ ಕ್ಲಬ್ ಸಹಭಾಗಿತ್ವ ದಲ್ಲಿ ಭಾನುವಾರ ಏರ್ಪಡಿಸಿದ್ದ 'ಕೆಸರುಗದ್ದೆ ಕ್ರೀಡಾಕೂಟ' ಉದ್ಘಾಟಿಸಿ ಅವರು ಮಾತನಾಡಿದರು.

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಲಯ ಸೇನಾನಿ ಗಣೇಶ ಶೆಟ್ಟಿ ಆರಂಬೋಡಿ, ಸಿದ್ಧಕಟ್ಟೆ ಕ್ಲಬ್ಬಿನ ಅಧ್ಯಕ್ಷ ಶಿವಯ್ಯ ಎಸ್.ಸಿ., ಮಡಂತ್ಯಾರು ಕ್ಲಬ್ಬಿನ ಅಧ್ಯಕ್ಷ ನಿತ್ಯಾನಂದ ಬಿ. ಶುಭ ಹಾರೈಸಿದರು.

ಪ್ರಮುಖರಾದ ಅವಿಲ್ ಮಿನೇಜಸ್,

ಕಿಶೋರ್ ಕುಮಾರ್, ರಾಜೇಶ ಶೆಟ್ಟಿ ಸೀತಾಳ, ಪದ್ಮನಾಭ ಕೋಟ್ಯಾನ್, ತುಳಸಿದಾಸ ಪೈ, ಕೆ.ರಮೇಶ ನಾಯಕ್ ರಾಯಿ, ಮೈಕಲ್ ಡಿಕೋಸ್ತ ಮತ್ತಿತರರು ಇದ್ದರು. 

ಇದೇ ವೇಳೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿಜಯ ಫೆರ್ನಾಂಡಿಸ್, ರಾಜೇಶ ನೆಲ್ಯಾಡಿ, ಸಂದೀಪ್ ಶೆಟ್ಟಿ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment