ಬಂಟ್ವಾಳ: ತಾಲೂಕಿನ ಗೋಳ್ತಾಮಜಲು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿ "ಆಟಿದಪೊರ್ಲು " ವಿಶೇಷ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ಬತ್ತದ ಕಲೆಸೆಯಲ್ಲಿ ಇದ್ದ ತೆಂಗಿನ ಹಿಂಗಾರವನ್ನು ಅರಲಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮೃತ ಕಾಲೇಜ್ ಪಡೀಲ್ ಮಂಗಳೂರು ಇಲ್ಲಿನ ಪ್ರಿನ್ಸಿಪಾಲ್ ಚಂದ್ರಹಾಸ್ ಕಣ್ಣತೀರ್ಥ ಆಟಿ ಆಚರಣೆಯ ವಿಶೇಷತೆ, ಪ್ರಾಮುಖ್ಯತೆ ಯ ಬಗ್ಗೆ ಮಾಹಿತಿ ಹಂಚಿಕೊಂಡರು,
ಪತಂಜಲಿ ಯೋಗ ಸಮಿತಿ ನಿಟಿಲಾಪುರ ಇದರ ಗುರುಗಳಾದ ಸರಸ್ವತಿ ಮಾತಾಜಿ ಆಟಿ ತಿಂಗಳಲ್ಲಿ ಬಳಸುವ ಔಷಧಿ ಸಸ್ಯಗಳು, ಹಾಗೂ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ನಡೆಸುವ ಸ್ಪರ್ಧೆಗಳನ್ನು ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿಗೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.ಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ವಿವಿಧಮನರಂಜನೆ ಕಾರ್ಯಕ್ರಮ
ಜರಗಿತ್ತು
ಆಟಿ ಕೆಲೆಂಜದ ಸಾಂಪ್ರದಾಯಕ್ಕೆ ಯಾವುದೇ ತರಹ ಕೊರತೆ ಬರದ ರೀತಿಯಲ್ಲಿ ಶಾಲಾ ಮಕ್ಕಳೇ ಆಟಿಕೆಲೆಂಜಾ ವೇಷ ಧರಿಸಿ ನರ್ತಿಸಿ ಪೋಷಕರ ಹಾಗೂ ಸೇರಿದ ಜನರ ಮನಸ್ಸು ಸೋರೆಗೊಂಡರು,
ಮಕ್ಕಳ ಪೋಷಕರು ತಮ್ಮ ಮನೆಯಲ್ಲಿಯೇ ತಯಾರಿಸಿ ಆಟಿ ಸಮಯದಲ್ಲಿ ಮಾಡುವ ವಿವಿಧ ಆಹಾರ ತಿಂಡಿ ತಿನಸುಗಳನ್ನು ಮಾಡಿ ತಂದಿದ್ದು ಪರಸ್ಪರ ಹಂಚಿಕೊಂಡು ಸಂತೋಷಪಟ್ಟರು
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯು ಉಪಾಧ್ಯಕ್ಷ ಚಂಚಲಾಕ್ಷಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಶಾಲಾ ಪ್ರಭಾರ ಮುಖಕ್ಕೆ ಶಿಕ್ಷಕಿ ಶೋಭಲತ ಟೀಚರ್, ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಾರುಣ್ಯ ಸ್ವಾಗತಿಸಿ, ಅನನ್ಯ ಬಹುಮಾನಗಳ ಪಟ್ಟಿ ವಾಚಿಸಿ, ಎಂ ಕೆ ಖುಷಿ ಕಾರ್ಯಕ್ರಮ ನಿರೂಪಿಸಿದರು.
ರಾಜೇಶ್ ದೇವಾಡಿಗ,ಶಿಕ್ಷಕರುಗಳಾದ ಪ್ರವೀಣ್ ಬಿ, ಜಯರಾಮ್ ನಾವಡ, ಅಶ್ವಿನಿ, ನಿಶ್ಮಿತಾ, ಇಂದಿರಾ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.















