ಬಂಟ್ವಾಳ :ನೇತ್ರಾವತಿ ಸಂಗಮ ಬಂಟ್ವಾಳ ಮತ್ತು ಶ್ರೀ ಲಕ್ಷ್ಮೀ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಿಣ್ಣರ 5 ದಿನಗಳ ಬೇಸಿಗೆ ಶಿಬಿರವು ಇತ್ತೀಚೆಗೆ ಜಾರಂದಗುಡ್ಡೆಯಲ್ಲಿ ನಡೆಯಿತು.
ಶಿಬಿರವನ್ನು ಕಲಾವಿದ,ರಾಜ್ಯ ಪ್ರಶಸ್ತಿ ಪುರಸ್ಕೃತ ಸದಾಶಿವ ಡಿ ತುಂಬೆ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಬಿಸಿರೋಡ್ ಸೂರ್ಯ ವಂಶಿ ಫೌಂಡೇಶನ್ ನ ಅಧ್ಯಕ್ಷ ಡಾ. ಗೋವರ್ಧನ್ ರಾವ್ ಮಾತನಾಡಿ,ಮಕ್ಕಳಿಗೆ ಸತ್ಸಂಗ ಮತ್ತು ಸಮಯ ಪ್ರಜ್ಞೆಯನ್ನು ಕಲಿಸುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ., ಮಕ್ಕಳ ಪ್ರತಿಭೆಗಳಿಗೆ ಅನುಕೂಲ ವಾಗುವ ಶಿಬಿರಗಳನ್ನು ಏರ್ಪಡಿಸಿರುವುದು ಶ್ಲಾಘನಿಯ ಎಂದರು.
ಎಸ್ ಸಿ ಐ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದರು.
ಅತಿಥಿಗಳಾಗಿ ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ದಯಾನಂದ, ಉದ್ಯಮಿ ಮೂಸಾ ಹಾಜಿ ಚೆರೂರ್ ಕಾಸರಗೋಡು, ಉಮಾಶಂಕರ್ ಅಮೀನ್ ಜಾರಂದಗುಡ್ಡೆ, ಪಿ ಎ ರಹೀಮ್ ಶುಭ ಹಾರೈಸಿದರು, ದೇವಿಪ್ರಸಾದ್ ದೇವಂದ ಬೆಟ್ಟು ಸ್ವಾಗತಿಸಿ,ಸುಧೀರ್ ವಂದಿಸಿದರು.
ಶುಭ ಆನಂದ ಬಂಜನ್, ಪಿ ಮಹಮ್ಮದ್, ಶಿಕ್ಷಕ ರಮೇಶ್ ಉಳಯ ಮಕ್ಕಳಿಗೆ ವಿವಿಧ ಚಟುವಟಿಕೆ ಮೂಲಕ ತರಬೇತಿ ನೀಡಿದರು, ಡಾ ವಾರಿಜ ನಿರ್ಬೈಲು ದೇಶ ಭಕ್ತಿ ಹಾಡಿಸಿದರು.5 ದಿವಸವು ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.















