ಮಂಗಳೂರು: ತಾಲೂಕಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್(ರಿ ) ವತಿಯಿಂದ ಪೆರ್ಮಂಕಿ ಕ್ರೀಡೋತ್ಸವವು ಜನವರಿ 28 ಭಾನುವಾರ ಜರಗಿತು. ವೆಂಕಟರಮಣ ಉಳಿತ್ತಾಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾ.ಪಂ. ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಕ್ರೀಡೋತ್ಸವದ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪದ್ಮನಾಭ ಶೆಟ್ಟಿ, ರವಿರಾಜ್ ರಾವ್ ನಳಂದ, ಶ್ರೀಧರ ಪೂಜಾರಿ, ದಿನೇಶ್ ಕುಮಾರ್, ಪ್ರಶಾಂತ್ ಸಲ್ದಾನ, ನಿತಿನ್, ಕಿರಣ್ ಉಪಸ್ಥಿತರಿದ್ದರು. ಸುದರ್ಶನ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ
ಪದ್ಮನಾಭ ಪೂಜಾರಿ, ಶ್ರೀಧರ ಪಿ, ಹರೀಶ್ ಕೆ, ಶರತ್ ಶೆಟ್ಟಿ, ಅಶೋಕ್ ಕುಮಾರ್, ಪದ್ಮನಾಭ ಬೆಲ್ಚಡ, ಭಾಸ್ಕರ್ ಅಮೀನ್, ದಾಮೋದರ ಪೂಜಾರಿ ಮತ್ತು ಸದಸ್ಯರು ಸಹಕರಿಸಿದರು. ಗ್ರಾಮದ ಜನತೆ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಹಿತಾಶ್ರೀ, ದಿವೇಶ್ ಪ್ರಾರ್ಥಿಸಿದರು. ಶ್ರೀನಾಥ್ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು.














