ಕಣಿಯೂರು: ಕೇಶರಾಶಿಯನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ ಶಾಲಾ ಬಾಲಕಿ.

Coastal Bulletin
ಕಣಿಯೂರು: ಕೇಶರಾಶಿಯನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ ಶಾಲಾ ಬಾಲಕಿ.

ಬಂಟ್ವಾಳ :ಜ 28, ಶಾಲಾ ಬಾಲಕಿಯೊಬ್ಬಳು ತನ್ನ ಕೇಶರಾಶಿಯನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿ ಸಮಾಜಕ್ಕೆ ಪ್ರೇರಣೆಯಾಗಿದ್ದಾಳೆ. ಈಕೆಯ ಹೆಸರು ಹರ್ಷಿಕಾ ಕಣಿಯೂರು.

ಲೋಕೇಶ್ ಹಾಗೂ ರೇಣುಕ ಕಣಿಯೂರು ಅವರ ಪುತ್ರಿಯಾಗಿದ್ದಾರೆ. 9 ವರ್ಷದ ಬಾಲಕಿ ಹರ್ಷಿಕಾ ಬಂಟ್ವಾಳ ತಾಲೂಕಿನ ಕಣಿಯೂರು ಸರಕಾರಿ ಪ್ರಾಥಮಿಕ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.

ತಾಯಿ ರೇಣುಕ ಕಾಣಿಯೂರು ಜ್ಞಾನ ದೀಪ ಶಿಕ್ಷಕಿಯೂ, ಸಂಪನ್ಮೂಲ ವ್ಯಕ್ತಿಯೂ ಆಗಿದ್ದು, ಮಕ್ಕಳು ಮನೆಯಲ್ಲಿ ಪೋಷಕರ ಮಾತನ್ನು ಹೇಗೆ ಅನುಕರಿಸುತಾರೆ ಎಂಬುದಕ್ಕೆ ತನ್ನ ಮಗಳ ಉದಾಹರಣೆ ನೀಡುತಾರೆ, ತನ್ನ ಮಗಳು 1ನೇ ತರಗತಿಯಲ್ಲಿ ಇರುವಾಗ ಶಾಲೆಯಲ್ಲಿ ತನ್ನ ಸಹಪಾಠಿಗಳು ಕೂದಲು ಕಟ್ ಮಾಡಿದ್ದನ್ನು ನೋಡಿ ಮನೆಗೆ ಬಂದು ತನ್ನ ಅಮ್ಮನಲ್ಲಿ ತನ್ನ ಕೂದಲನ್ನು ಕಟ್ ಮಾಡಲು ಹೇಳಿದಾಗ, ಬೇಡ ಕೂದಲು ದೊಡ್ಡದು ಆದಮೇಲೆ ಕಟ್ ಮಾಡಿದ್ರೆ ಕೂದಲು ಇಲ್ಲದ ಅದೆಷ್ಟೋ ಮಂದಿಗೆ ನಮ್ಮ ಕೂದಲು ನೀಡಿ ಅವರು ಸುಂದರವಾಗಿ ಕಾಣುವಂತೆ ಮಾಡಬಹುದು ಎಂದು

ಹೇಳಿ, ಕೂದಲು ಇಲ್ಲದೆ ಕ್ಯಾನ್ಸರ್ ಪೀಡಿತರ ಫೋಟೋ ತೋರಿಸಿದರು, ಆ ದಿನದಿಂದ ಮಗು ಕೂದಲು ಬೆಳೆಸವ ಯೋಚನೆಯಲ್ಲೇ ಇತ್ತು, ಪೋಷಕರು ಮರೆತರು ಮಗು ಮರೆತಿಲ್ಲ, ಈವಾಗ ಕಟ್ ಮಾಡಿ ಕೂದಲು ಇಲ್ಲದವರಿಗೆ ಕೊಡುವ ಎಂದು ಹೇಳಿದಾಗ ತಾಯೀ ಗೆ ಆಶ್ಚರ್ಯ, ಯಾವಾಗ ತಾನು ಹೇಳಿದ ಮಾತನ್ನು ಮನಸ್ಸಿಗೆ ಹಚ್ಚಿಕೊಂಡು ಕೂದಲು ಬೆಲೆಯು ವರೆಗೆ ಅಳತೆ ಮಾಡಿಕೊಂಡು ಬಂದು ಹೇಳಿದ್ದನ್ನು ನೋಡಿ, ಈಗ ಬೇಡ ಏಪ್ರಿಲ್ ರಜೆಯಲ್ಲಿ ಕೊಡೋಣ ಎಂದರು ಮಗು ಕೇಳಲಿಲ್ಲ, ಅದರಂತೆ ತನ್ನ ಮಗಳ ಇಚ್ಛೆ ಪ್ರಕಾರ ಇವತ್ತು ತನ್ನ ಸುಂದರವಾದ ಕೂದಲನ್ನು ಕಟ್ ಮಾಡಿ ಯುವಶಕ್ತಿ ಕಡೆ ಶಿವಾಲಯದ ಸಂಘಟನೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದಾನ ಮಾಡಿದ್ದಾರೆ.ಎಳೆಯ ಮಗುವಿನ ‌ಈ ನಡೆ ವ್ಯಾಪಾಕ ಪ್ರಶಂಸೆಗೆ ಪಾತ್ರವಾಗಿದೆ.

Leave a Comment