ಅಮ್ಮುಂಜೆ: ಶ್ರೀ ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಲಶಾಭಿಷೇಕ,ಧಾರ್ಮಿಕ ಸಭೆ. ಸತ್ಕರ್ಮ ದಿಂದ ಪುಣ್ಯ ಪ್ರಾಪ್ತಿ ಪ್ರಾಪ್ತಿ :ಶ್ರೀ ಗುರುದೇವಾನಂದ ಸ್ವಾಮೀಜಿ.

Coastal Bulletin
ಅಮ್ಮುಂಜೆ: ಶ್ರೀ ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಲಶಾಭಿಷೇಕ,ಧಾರ್ಮಿಕ ಸಭೆ. ಸತ್ಕರ್ಮ ದಿಂದ ಪುಣ್ಯ ಪ್ರಾಪ್ತಿ ಪ್ರಾಪ್ತಿ :ಶ್ರೀ ಗುರುದೇವಾನಂದ ಸ್ವಾಮೀಜಿ.

ಬಂಟ್ವಾಳ :ಧರ್ಮದ ಪುನಃರುತ್ತನದ ಕಾಲದಲ್ಲಿ ಇಂದು ನಾವಿದ್ದೇವೆ, ಧರ್ಮ ಹಾಗೂ ಕರ್ಮ ಒಂದೇ ನಾಣ್ಯದ ಎರಡು ಮುಖಗಳು, ಬದುಕು ಸಾರ್ಥಕವಾಗಲು ಇದರ ಅಗತ್ಯವಿದೆ ,ಸತ್ಕರ್ಮ ದಿಂದ ಪುಣ್ಯ ಪ್ರಾಪ್ತಿ ಪ್ರಾಪ್ತಿಯಾಗುತ್ತದೆ , ದಾನದಿಂದ ಸಂಪತ್ತು ಸಿದ್ದಿಯಾಗುತ್ತದೆ,ಕ್ಷಮಾ ಗುಣ ದಿಂದ ಬಂಧು ಬಳಗ ವೃದ್ಧಿಯಾಗುತ್ತದೆ .ಆದ್ದರಿಂದ ಈ ಎಲ್ಲಾ ಸದ್ಗುಣಗಳನ್ನು ಜೀವನದಲ್ಲಿ ರೂಡಿಸಿಕೊಂಡು, ನಿರಂತರ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜ 21ರಿಂದ 29ರ ತನಕ ನಡೆಯುವ ಪ್ರತಿಷ್ಟಾಷ್ಟಬಂಧ ಬ್ರಹ್ಮಕಲಶಾಭಿಷೇಕದ 8ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹೇಳಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿ ರಮಾನಾಥ ರೈ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು, ಬಿ ನಾಗರಾಜ ಶೆಟ್ಟಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು,ಚಂದ್ರಹಾಸ ಶೆಟ್ಟಿ ಎಲೆಕ್ಟ್ರಿಕಲ್ ಗುತ್ತಿಗೆದಾರರು,

ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮ್ಮುಂಜೆಗುತ್ತು ಯಶೋದ ಡಿ ಶೆಟ್ಟಿ ಅಮ್ಮುಂಜೆಗುತ್ತು, ರವೀಂದ್ರ ಶೆಟ್ಟಿ ಟ್ರಸ್ಟಿ.ವಿವೇಕ ಶೆಟ್ಟಿ ಉದ್ಯಮಿ, ಪ್ರಭಾಕರ ಶೆಟ್ಟಿ, ಉದ್ಯಮಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ ದಂಪತಿಗಳನ್ನು ಒಡಿಯೂರು ಶ್ರೀಗಳು ಶಾಲು ಹೊದಿಸಿ ಗೌರವಿಸಿದರು.

ಕಾರ್ಯಾಧ್ಯಕ್ಷ ಕೆ ಕೃಷ್ಣ ಕುಮಾರ ಪೂಂಜ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಸತ್ಯ ಪ್ರಕಾಶ ಶೆಟ್ಟಿ ದನ್ಯವಾದವಿತ್ತು, ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment