ನರಿಕೊಂಬು: ವಿವೇಕ ಕಿರಣ ಮಂದಿರದ 15ನೇ ವರ್ಧಂತ್ಯುತ್ಸವ ಕಾರ್ಯಕ್ರಮ ಸಂಪನ್ನ.

Coastal Bulletin
ನರಿಕೊಂಬು: ವಿವೇಕ ಕಿರಣ ಮಂದಿರದ 15ನೇ ವರ್ಧಂತ್ಯುತ್ಸವ ಕಾರ್ಯಕ್ರಮ ಸಂಪನ್ನ.

ಬಂಟ್ವಾಳ :ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರ ಅಮೃತ ಹಸ್ತದಿಂದ 2008ರಲ್ಲಿ ಉದ್ಘಾಟನೆಗೊಂಡ ವಿವೇಕ ಜಾಗ್ರತ ಬಳಗ ಬಂಟ್ವಾಳದ ವಿವೇಕ ಕಿರಣ ಮಂದಿರ ನರಿಕೊಂಬು ಇದರ 15ನೇ ವರ್ಧಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು.

ವರ್ಧಂತ್ಯುತ್ಸವ ಪ್ರಯುಕ್ತ ಬೆಳಿಗ್ಗೆ ಜಗನ್ಮಾತೆಗೆ ಕುಂಕುಮಾರ್ಚನೆ,ಸಂಜೆ 3:00 ರಿಂದ ಶ್ರೀ ದುರ್ಗಾ ಕೃಪಾಂಬುಧಿ ಎಂಬ ವಿಶಿಷ್ಟ ದುರ್ಗಾ ಪೂಜಾ ಕಾರ್ಯಕ್ರಮ ನೆರವೇರಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಶ್ರಣ್ಣ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಭಾರತೀಯ ಜ್ಞಾನ ಪರಂಪರೆಯ ಹಿರಿಮೆಯನ್ನು ಕೊಂಡಾಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯಿಂದ ಭವ್ಯ ಭಾರತದ ಭವ್ಯ ಸಂಸ್ಕೃತಿ ವಿಶೇಷವಾಗಿ ಬೆಳಗಲಿದೆ ಎಂದು ಹೇಳಿದರು.

ರೇಖಿ ಗುರು ಪೊಳಲಿ ಮಾದು ಕೋಡಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಹಾಗೂ ಶ್ರೀ ಸಾಯಿ ಹೀಲಿಂಗ್ ಸೆಂಟರ್ ನ ಸಂಸ್ಥಾಪಕ ವಿಜಯ ಮಾದುಕೋಡಿ ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವದಿಸಿದರು.

ಅತಿಥಿ ಪ್ರಕಾಶ ಕುಮಾರ ಶೆಟ್ಟಿ ಮಾತನಾಡಿ, ವ್ಯಕ್ತಿಗಳ ಮನಃ ಹಾಗೂ ಹೃದಯ ಪರಿವರ್ತಿಸಿ ಸಾಮಾನ್ಯ ವ್ಯಕ್ತಿಗಳನ್ನು ಶ್ರೇಷ್ಠರನ್ನಾಗಿ ರೂಪಿಸಿ ವ್ಯಕ್ತಿತ್ವ ನಿರ್ಮಾಣಗೊಳಿಸುವ ಕಾರ್ಯವನ್ನು ವಿವೇಕ ಜಾಗೃತ ಬಳಗ ಮಾಡುತ್ತಿದೆ ಎಂದು ಶ್ಲಾಘಿಸಿದರು.   

ಹರಿವಂಶ ಪುರಾಣ ಪ್ರವಚನ ನಡೆಸಿ ಕೊಟ್ಟ ವಿದ್ವಾನ್ ಕುತ್ಪಾಡಿ ಶ್ರೀನಿವಾಸ ಭಟ್ಟರು ಮಾತನಾಡಿ, ಇಲ್ಲಿನ ಸ್ತೋತ್ರಗಳು ಬಹಳ ಶ್ರದ್ಧೆಯಿಂದ ಹರಿವಂಶ ಪುರಾಣ ಪ್ರವಚನದ ಶ್ರವಣದಿಂದ ಆಲಿಸಿದ್ದಾರೆ, ಎಲ್ಲರಿಗೂ ಶ್ರೇಯಸ್ಸು ಸಿಗಲಿ ಎಂದು ಹಾರೈಸಿದರು.ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ

ವಿದ್ಯಾರ್ಥಿಗಳಾದ ನರಿಕೊಂಬು ಗ್ರಾಮದ ವನಿತಾ ಮತ್ತು ಗೋವಿಂದ ಪುತ್ರ ಮಾ ಧನುಷ್ ಹಾಗೂ ಮಣಿನಾಲ್ಕೂರು ಗ್ರಾಮದ ವಿನಯ ಮತ್ತು ಯಶೋಧರ ಇವರ ಪುತ್ರಿ ಕು.ಪೃಥ್ವಿ ಗೆ ಶೈಕ್ಷಣಿಕ ಸಾಧನೆಗೆ ಅಭ್ಯಾಸಾದರ್ಶ ಪ್ರಶಸ್ತಿ ಜೊತೆಗೆ 10,101 ರೂ.ನಗದು ನೀಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯರೂಪಕ ಪುಣ್ಯಕೋಟಿ ಹಾಗೂ ಬಳಗದ ಸದಸ್ಯರಿಂದ ತುಳು ಯಕ್ಷಗಾನ ಗುರುದಕ್ಷಿಣೆ ಜನ ಮೆಚ್ಚುಗೆ ಗಳಿಸಿತು.

ಮಧುಸೂದನ್ ಶಂಭೂರು ಸ್ವಾಗತಿಸಿ ರಶ್ಮಿತಾ ರಾಘವೇಂದ್ರ ಪೈ ಮೆಲ್ಕಾರ್ ವಂದಿಸಿ ಶಿವರಾಜ್ ಅಂತರ ಕಾರ್ಯಕ್ರಮ ನಿರೂಪಿಸಿದರು.

ಮಂದಿರದಲ್ಲಿ ನಡೆಯುವ ಸೇವಾ ಕಾರ್ಯಗಳು :

ದಿವ್ಯ ಸನ್ನಿಧಿಯಲ್ಲಿ ನಿರಂತರವಾಗಿ ಕಳೆದ 15 ವರ್ಷಗಳಿಂದ ಸೇವಾ ಚಟುವಟಿಕೆಗಳು ನಡೆಯುತ್ತಿವೆ . ಪ್ರತಿ ಭಾನುವಾರ ಬೆಳಿಗ್ಗೆ 6:00ಗೆ ಕುಂಕುಮಾರ್ಚನೆ ನಡೆಯುತ್ತಿದ್ದು ನೂರಾರು ಸದ್ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ 

ಪ್ರತಿ ಭಾನುವಾರ ಸಂಜೆ 5 ಗಂಟೆಗೆ ಶ್ರೀ ರಾಮರಕ್ಷಾ ಸ್ತೋತ್ರ ಪಠಣ ಹಾಗೂ ಭಜನಾ ಕಾರ್ಯಕ್ರಮವು ನಡೆಯುವುದು ಆರು ಗಂಟೆಗೆ ಮಂಗಳಾರತಿ ನೆರವೇರುವುದು

ನಿರಂತರವಾಗಿ ಸಮಾಜದ ಎಲ್ಲಾ ತರದ ಜನರಿಗೆ ಬೇಕಾದ ವಿವಿಧ ಶಿಬಿರಗಳು ನಡೆಯುತ್ತಿವೆ. ಯುವಕರ ವ್ಯಕ್ತಿತ್ವ ವಿಕಸನ ಶಿಬಿರ ವನಿತಾತಾಸಂಗಮ, ಆತ್ಮೋನ್ನತಿ ಶಿಬಿರ ವಿದ್ಯಾರ್ಥಿಗಳಿಗೆ ಶಿಶು ಸಂಧಿಪ ಹಾಗೂ ವಿದ್ಯಾರ್ಥಿ ದೀಪ, ಆರೋಗ್ಯ ಶಿಬಿರ , ರಕ್ತದಾನ ಶಿಬಿರ, ಸಾವಯವ ಕೃಷಿ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ

Leave a Comment