ಬಂಟ್ವಾಳ :ಯಕ್ಷ ಕಲಾ ಪೊಳಲಿ ಇದರ 30ನೇ ವರ್ಧoತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಷೋತ್ಸವ-2025 "ತಿಂಶತ್ ಸಂಭ್ರಮ" ಸೆ. 27ರಂದು ಶನಿವಾರ ಪೊಳಲಿ ದೇವಸ್ಥಾನದ ರಾಜಾಂಗಣದಲ್ಲಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ ಹಾಗೂ ಯಕ್ಷಗಾನ ವಿದ್ವಾಂಸ ಡಾ ಎಂ ಪ್ರಭಾಕರ ಜೋಶಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಜೆ ನಡೆದ ಸಭಾ ಪರ್ವ ಕಾರ್ಯಕ್ರಮದ ಅಧ್ಯಕ್ಷತೆ ವೇದಮೂರ್ತಿ ಕೊಡಿಮಜಲು ಅನಂತಪದ್ಮನಾಭ ಉಪಾಧ್ಯಯ ವಹಿಸಿದ್ದರು,ವಿವೇಕಾಚೈತನ್ಯಾನಂದ ಸ್ವಾಮಿ ಆಶೀರ್ವಾಚನ ನೀಡಿದರು.
ವೇದಿಕೆಯಲ್ಲಿ ಪೊಳಲಿ ದೇವಸ್ಥಾನದ ಆಡಳಿತ ಮುಕ್ತೇಸರ ಡಾ ಮಂಜಯ್ಯ ಶೆಟ್ಟಿ, ಪ್ರಧಾನ ಅರ್ಚಕ ಮಾದವ ಭಟ್ ಪೊಳಲಿ, ಭುಜಬಲಿ ಧರ್ಮಸ್ಥಳ, ಭಾಗವತ ಸತೀಶ್ ಶೆಟ್ಟಿ ಪಟ್ಲ, ಪ್ರಭಾಕರ ಸುವರ್ಣ ಕರ್ನಿರೆ ಅಧ್ಯಕ್ಷರು ಸುವರ್ಣ ಪ್ರತಿಷ್ಠಾನ ಕರ್ನಿರೆ, ಸತೀಶ್ ಪೂಜಾರಿ ಬೆಳಪು ಮಾಜಿ ಅಧ್ಯಕ್ಷರು ಬಿಲ್ಲವಾಸ್ ದುಬೈ, ಕಲಾ ಪೋಷಕ ರಾಜೇಂದ್ರ ಕಕ್ಯಪದವು,ಉದ್ಯಮಿ ಭುವನೇಶ್ ಪಚ್ಚಿನಡ್ಕ,ಅರ್ಚಕ ನಾರಾಯಣ ಭಟ್ ಪೊಳಲಿ ಉಪಸ್ಥಿತರಿದ್ದರು.
ಯಕ್ಷ ಪೊಳಲಿ ಪ್ರಶಸ್ತಿ ಪ್ರದಾನ:
ಖ್ಯಾತ ಹೃದ್ರೋಗ ತಜ್ಞ ಹಾಗೂ ಕಲಾ ಪೋಷಕ ಡಾ ಪದ್ಮನಾಭ ಕಾಮತ್ ಇವರಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪದ್ಮನಾಭ ಕಾಮತ್ ಮಾತನಾಡಿ, ಪೊಳಲಿ ಶ್ರೀ ದೇವಿಯ ಸಾನಿಧ್ಯದಲ್ಲಿ ಜೀವಮಾನದ ಶ್ರೇಷ್ಠ ಪ್ರಶಸ್ತಿ ಅನುಗ್ರಹವಾಗಿದೆ ಇದು ನನ್ನ ಭಾಗ್ಯ, ನನ್ನ ವೃತ್ತಿ ಜೀವನದಲ್ಲಿ ಸಿಕ್ಕಿದ ಪ್ರಶಸ್ತಿಗಿಂತಲೂ ಮಿಗಿಲಾದುದು ಎಂದು ಹೇಳಿದರು.
ಹಿರಿಯ ಕಲಾವಿದರಿಗೆ ಗೌರವ:
13ಮಂದಿ ಹಿರಿಯ ಯಕ್ಷಗಾನ ಕಲಾವಿದರಾದ, ಭಾಸ್ಕರ ರೈ ಕುಕ್ಕುವಳ್ಳಿ,ಮಾಂಬಾಡಿ ಸುಬ್ರಮಣ್ಯ ಭಟ್,ಆಡೂರ್ ಲಕ್ಷ್ಮೀ ನಾರಾಯಣ ರಾವ್,ಕೊಳ್ತಿಗೆ ನಾರಾಯಣ ಗೌಡ,ಉಬರಡ್ಕ ಉಮೇಶ್ ಶೆಟ್ಟಿ,ಜಬ್ಬಾರ್ ಸಮೋ ಸಂಪಾಜೆ,ಡಾ ವಸಂತ್ ಕುಮಾರ್ ಪೆರ್ಲ,ಗಿರೀಶ್ ಹೆಗ್ಡೆ ಪುತ್ತೂರು, ಜಾಗದಭಿರಾಮಸ್ವಾಮಿ ಪಡುಬಿದ್ರಿ,ನಾ ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಶಿವರಾಮ್ ಪಣಂಬೂರು,ಮಹಾಬಲೇಶ್ವರ ಬಾಗಮಂಡಲ ಇವರಿಗೆ ಗೌರವ ನಿಧಿಯೊಂದಿಗೆ ಸನ್ಮಾನಿಸಲಾಯಿತು.
ಯಕ್ಷ ಸಂಸ್ಥೆಗಳಿಗೆ
ಗೌರವ:
2 ಯಕ್ಷಗಾನ ಸಂಘಟನೆಗಳಾದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ರಿ ಮಂಗಳೂರು ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಕೈರಂಗಳ ಇವರಿಗೆ ಯಕ್ಷಕಲಾ ಗೌರವ ನೀಡಲಾಯಿತು.
ಕೀರ್ತಿಶೇಷರ ಸಂಸ್ಮರಣೆ:
ಕೀರ್ತಿಶೇಷರಾದ 8 ಮಂದಿ ಹಿರಿಯ ಕಲಾವಿದರ ಸಂಸ್ಮರಣಾ ಭಾಷಣವನ್ನು ಖ್ಯಾತ ಅರ್ಥದಾರಿ ಉಜಿರೆ ಅಶೋಕ್ ಭಟ್ ಹಾಗೂ ಅಭಿನಂದನಾ ಭಾಷಣವನ್ನು ಲ. ಕದ್ರಿ ನವನೀತ ಶೆಟ್ಟಿ ಮಾಡಿದರು.ಸನ್ಮಾನಿತರ ಪರವಾಗಿ ಭಾಸ್ಕರ ರೈ ಕುಕ್ಕುವಳ್ಳಿ ಅನಿಸಿಕೆ ವ್ಯಕ್ತಪಡಿಸಿದರು.
ಯಕ್ಷ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿ,ಸಂಯೋಜಕ ಜನಾರ್ದನ ಅಮುಂಜೆ ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಯಕ್ಷ ಕಲಾ ಪೊಳಲಿ ಸಂಸ್ಥಾಪಕ ಅ ನ ಭ ಪೊಳಲಿ, ಸುಬ್ರಾಯ ಕಾರಂತ, ಶ್ರೀಕಾಂತ್ ಎಡಪಪದವು, ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರೆ ಮತ್ತಿತರರು ಉಪಸ್ಥಿತರಿದ್ದರು.
ಸಮಯದ ಬದಲಾವಣೆ ಕಿಕ್ಕಿರಿದ ಪ್ರೇಕ್ಷಕ ವರ್ಗ:
ಈ ವರ್ಷ ಯಕ್ಷ ಪೊಳಲಿಯ ಕಾರ್ಯಕ್ರಮ ಅಚ್ಚುಕಟ್ಟಾಗಿ,ಬೆಳಗಿನಿಂದ ರಾತ್ರಿವರೆಗೆ ಸಮಯದ ಬದಲಾವಣೆಯೊಂದಿಗೆ ನಡೆದ ಯಕ್ಷಗಾನ ಬಯಲಾಟವನ್ನು ಪ್ರೇಕ್ಷಕ ವರ್ಗ ಮುಕ್ತ ಮನಸಿನಿಂದ ಸ್ವಾಗತಿಸಿದ್ದು, ಸಭಾಂಗಣ ಕಿಕ್ಕಿರಿದು ತುಂಬಿದ್ದು ಕಾರ್ಯಕ್ರದ ಅಭೂತ ಪೂರ್ವ ಯಶಸ್ವಿಗೆ ಸಾಕ್ಷಿಯಾಗಿತ್ತು.
ಬೆಳಿಗ್ಗೆ 8.30ಗೆ ಪ್ರಾರಂಭವಾದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಜ್ವಾಲ ಪ್ರತಾಪ, ವೀರ ಬಬ್ರುವಾಹನ, ಧಮಯಂತಿ ಪುನರ್ ಸ್ವಯಂವರ ಯಕ್ಷಗಾನ ಬಯಲಾಟ ಹಾಗೂ ರಾತ್ರಿ 10.30ರವರೆಗೆ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ ಇವರಿಂದ ಮಧುರಾ ಮಹೀಂದ್ರ ಎಂಬ ಬಡಗುತಿಟ್ಟಿನ ಯಕ್ಷಗಾನ ಬಯಲಾಟ ಜನ ಮೆಚ್ಚುಗೆ ಗಳಿಸಿತು.















