ಮಂಗಳೂರು : ಸೆ.2ರಂದು ಮಂಗಳೂರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆದಿದೆ. ರಸ್ತೆಗಳ ತೇಪೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಕೂಳೂರು ಸಮೀಪದ ಗೋಲ್ಡ್ ಫಿಂಚ್ ಸಿಟಿ ಮೈದಾನಲ್ಲಿ 2 ಲಕ್ಷ ಜನರು ಕುಳಿತು ನೋಡಬಹುದಾದ ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ರಸ್ತೆ ತೇಪೆ ಕಾರ್ಯಕ್ಕೆ ಮಂಗಳೂರು ಮಹಾನಗರಪಾಲಿಕೆ ಅನುದಾನ ಬಿಡುಗಡೆ ಮಾಡಿದೆ. ರಸ್ತೆ ದುರಸ್ತಿ ಕಾರ್ಯ ಭರದಲ್ಲಿ ನಡೆಯುತ್ತಿದೆ. ಅದೇ ರೀತಿ ಪಿಡಬ್ಲ್ಯುಡಿಗೆ ಸೇರಿದ ರಸ್ತೆಗಳ ದುರಸ್ತಿ ಕಾಮಗಾರಿ ನಡೆಯುತ್ತಿದೆ.
ಈ ನಡುವೆ ಎನ್ಎಂಪಿಟಿಯಲ್ಲಿ ಲೋಕಾರ್ಪಣೆಗೊಳ್ಳಲಿರುವ ವಿವಿಧ ಯೋಜನೆಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಎನ್ಎಂಪಿಟಿ
ಕಾರ್ಯಕ್ರಮದ ನಂತರ ಪ್ರಧಾನಿ ಗೋಲ್ಡ್
ಫಿಂಚ್ ಸಿಟಿ ಮೈದಾನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. 2 ಲಕ್ಷ ಜನರು ಆಸೀನರಾಗಲು ಬೇಕಾಗುವ ಪೆಂಡಲ್ ನಿರ್ಮಾಣ ಕಾಮಗಾರಿ ಕೆಲಸ ನಡೆಯುತ್ತಿದೆ. ಇದರೊಂದಿಗೆ ಬೃಹತ್ ವೇದಿಕೆ ನಿರ್ಮಾಣವೂ ಆಗುತ್ತಿದೆ.80 ಅಡಿ ಅಗಲ, 60 ಅಡಿ ಉದ್ದ, 20 ಅಡಿ ಎತ್ತರದ ವೇದಿಕೆಯನ್ನು ಸಿದ್ಧಗೊಳ್ಳುತ್ತಿದೆ. ಸಭೆಯಲ್ಲಿ ಪಾಲ್ಗೊಂಡವರಿಗೆ ನೀರಿನ, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿದೆ.ವಾಹನಗಳ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.














