ಬಂಟ್ವಾಳ: ಕಳ್ಳಿಗೆ ಶ್ರೀ ಶನೈಶ್ಚರ ಪೂಜಾ ಸಮಿತಿ, ಬ್ರಹ್ಮರಕೊಟ್ಲು ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ನವಗ್ರಹ ಸಹಿತ ಶ್ರೀ ಶನೈಶ್ವರ ಪೂಜಾ ಮಹೋತ್ಸವವು ಆ 27ರಂದು ಶನಿವಾರ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ತುಂಬೆ ಇಲ್ಲಿಯ ಅರ್ಚಕರಾದ ವೆಂಕಟೇಶ್ ಕಾರಂತ ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನಡೆದ ಶನಿ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಶಿಧರ್ ಬ್ರಹ್ಮರಕೊಟ್ಲು,ಹರೀಶ್
ಚಂದ್ರಿಗೆ, ಶ್ರೀಕಾಂತ್ ದರಿಬಾಗಿಲು, , ಗಣೇಶ್ ದರಿಬಾಗಿಲು, ಶಿವಪ್ರಸಾದ್ ಕನಪಾಡಿ, ನಾಗೇಶ್ ದರಿಬಾಗಿಲು,ಪ್ರಶಾಂತ್ ಕನಪಾಡಿ, ಧೂಮಪ್ಪ ದರಿಬಾಗಿಲು, ನಾಗೇಶ್ ಶೆಟ್ಟಿ, ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.














