ಬಂಟ್ವಾಳ :ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು ಹಾಗೂ ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.ಆಟಿ ದ ಕೂಟ ಕಾರ್ಯಕ್ರಮವನ್ನು ಡಾ ಬಾಲಕೃಷ್ಣ ಕುಮಾರ್ ವೈದ್ಯರು ಹಾಗೂ ಉಪನ್ಯಾಸಕರು ಯೆನೆಪೋಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರು ದೀಪ ಬೆಳಗಿಸಿ,ತೆಂಗಿನ ಗರಿ ಅರಳಿಸುವ ಮುಖೇನ ಉದ್ಘಾಟಿಸಿ ಆಟಿ ತಿಂಗಳ ಮಹತ್ವ ಮತ್ತು ಸಂಸ್ಕೃತಿ ,ಆಚಾರ ವಿಚಾರ ಗಳ ಬಗ್ಗೆ ತಿಳಿಸುತ್ತಾ ಶ್ರೀ ಸಾಯಿ ಕಿಡ್ ಝೋನ್ ಸಂಸ್ಥೆ ಹಲವಾರು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮಾದರಿ ಸಂಸ್ಥೆ ಯಾಗಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ವೇದಿಕೆ ಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ಶ್ರೀಮತಿ ತೇಜಸ್ವಿನಿ ಪೂಜಾರಿ ಹಾಗೂ ಉಪಾಧ್ಯಕ್ಷ ರಾದ ಶ್ರೀ ಸುಂದರ್ ಎನ್. ಕೋಶಾಧ್ಯಕ್ಷ ರಾದ ಶ್ರೀಮತಿ ಜಯಶ್ರೀ,ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಆರತಿ ಅಮೀನ್,ಶ್ರೀ ರಾಜೇಶ್ ಅಮಿನ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ಐತಪ್ಪ ಪೂಜಾರಿ ಯವರು ಆಟಿ ದ ಕೂಟ ಕಾರ್ಯಕ್ರಮ ದಲ್ಲಿ ಒಟ್ಟು 49 ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರು ಮಾಡಿ ತಂದು ಆಟಿದ ಕೂಟ
ವನ್ನು ಯಶಸ್ವಿ ಮಾಡಿದ ಪೋಷಕರಿಗೆ,ರಕ್ಷಕ ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ,ಕೆಸರ್ಡ್ ಒಂಜಿ ದಿನದ ಕ್ರೀಡಾಕೂಟ ದಲ್ಲಿ ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ,,ಶಿಕ್ಷಕಿಯರಿಗೆ, ಶಿಕ್ಷಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಿಬ್ಬಂದಿ ವರ್ಗಕ್ಕೆ , ಕೃತಜ್ಞತೆ ಗಳನ್ನೂ ಸಲ್ಲಿಸಿ ಶುಭ ಹಾರೈಸಿದರು. ಶಿಕ್ಷಕಿ ಕುಮಾರಿ ಗೀತಾ ಸ್ವಾಗತಿಸಿ,ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ,ಧನ್ಯವಾದ ಸಲ್ಲಿಸಿದರು.
ಶಿಕ್ಷಕಿಯರಾದ ಶ್ರೀಮತಿ ಚೈತ್ರ ,ಮತ್ತು ಶ್ರೀಮತಿ ಪುಷ್ಪಲತಾ ಕೆಸರ್ಡ್ ಒಂಜಿ ದಿನದ ಕ್ರೀಡಾಕೂಟ ದ ವಿಜೇತರ ಪಟ್ಟಿ ವಾಚಿಸಿದರು.














