ಬಂಟ್ವಾಳ :ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಬಂಟ್ವಾಳ, ಸೀನಿಯರ್ ಛೇಂಬರ್ ಬಂಟ್ವಾಳ ನೇತ್ರಾವತಿ ಸಂಗಮ, ರೊಟರಿ ಕ್ಲಬ್ ಮೊಡಂಕಾಪು, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರ ಸಂಘ ಬಂಟ್ವಾಳ,ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜುಲೈ 25 ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭವನ್ನು ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಸೇಸಪ್ಪ ನಿರ್ಮಲ್ ಉದ್ಘಾಟಿಸಿದರು.ಸೀನಿಯರ್ ಛೇಂಬರ್ ರಾಷ್ಟೀಯ ಉಪಾಧ್ಯಕ್ಷ Snr PPF ಹರಿಪ್ರಸಾದ್ ರೈ ಕಾರ್ಯಕ್ರಮದ ಸದುಪಯೋಗದ ಕುರಿತು ಮಾತನಾಡಿದರು.ರೊಟರಿ ಮೊಡಂಕಾಪು ಸ್ಥಾಪಕಾಧ್ಯಕ್ಷ ಎಲಿಯಾಸ್ ಸಾಂಕ್ರಿಸ್ ಶುಭ ಹಾರೈಸಿದರು.
ಮಂಗಳೂರು ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಇವರು ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಕುರಿತಾಗಿ ವಿವರವಾದ ಮಾಹಿತಿನೀಡಿದರು. ಸೀನಿಯರ್ ಛೇಂಬರ್ ಅಧ್ಯಕ್ಷ ಡಾ.ಆನಂದ್ ಬಂಜನ್
ಸಭಾದ್ಯಕ್ಷತೆ ವಹಿಸಿದ್ದರು.
ರೊಟರಿ ಕ್ಲಬ್ ಮೊಡಂಕಾಪು ಅಧ್ಯಕ್ಷ ರೊ. ಪಿ.ಎ. ರಹೀಂ ಸ್ವಾಗತಿಸಿದರು, ಸೀನಿಯರ್ ಛೇಂಬರ್ ನಿಕಟ ಪೂರ್ವಾಧ್ಯಕ್ಷ Snr. ಜಯಾನಂದ ಪೆರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಧನ್ಯವಾದವಿತ್ತರು.
ಕಾರ್ಮಿಕ ನಿರೀಕ್ಷಕಿ ಗ್ರೇಸಿಯ ಡಿಸೋಜ, ರೋಟರಿ ಕಾರ್ಯದರ್ಶಿ ಅಲೆಗ್ಸಾಂಡರ್ ಲೋಬೋ, ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಶಮೀರ್ ಪಜೀರು, ಸೀನಿಯರ್ ಛೇಂಬರ್ ಕೋಶಾಧಿಕಾರಿ ಸತ್ಯನಾರಾಯಣ ರಾವ್ ಉಪಸ್ಥಿತರಿದ್ದರು. ಇಶ ಅನ್ವಿ ಪ್ರಾರ್ಥಿಸಿದರು















