Coastal Bulletin

ಮಂಗಳೂರು: ಮುಂಬೈ ನಗರದಲ್ಲಿ ಒಂಬತ್ತು ದಶಕಗಳಿಂದ ಕುಲಾಲ ಸಮಾಜದ ಏಕತೆಗಾಗಿ ಶ್ರಮಿಸುತ್ತಿರುವ ಕುಲಾಲ ಸಂಘ ಮುಂಬಯಿ ಸುಮಾರು.15 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರಿನ ಮಂಗಳಾದೇವಿಯ ಸಮೀಪದಲ್ಲಿ ಅತ್ಯಾಧುನಿಕ ಕುಲಾಲ ಭವನನಿರ್ಮಾಣಗೊಳ್ಳುತ್ತಿದ್ದು ಇದರ ಮೊದಲ ಮಹಡಿಯನ್ನು ಪೂರ್ಣಗೊಂಡಿದ್ದು ಇದರ ಲೋಕಾರ್ಪಣೆಯ ಪ್ರಯುಕ್ತ ಜೂನ್ 25. ರಂದು ಕುಲಾಲ ಭವನದ ನೆಲಮಾಳಿಗೆಯಲ್ಲಿ ಸಂಜೆ ಸುದರ್ಶನ ಹೋಮ .ವಾಸ್ತು ಹೋಮವನ್ನು ಇತರ ಧಾರ್ಮಿಕ ಕಾರ್ಯಕ್ರಮಗಳು ಉಡುಪಿ ದೊಡ್ಡಣಗುಡ್ಡೆಯ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಶ್ರೀ ರಮಾನಂದ ಗುರೂಜಿ ಅವರನ್ನು ವಿಶೇಷವಾಗಿ ಮುಂಬಯಿ ಕುಲಾಲ ಸಂಘದ ವತಿಯಿಂದ ಗೌರವಿಸಲಾಯಿತು ಗೌರವನ್ನು ಸ್ವೀಕರಿಸಿದ ಗುರೂಜಿ ಅವರು ಆಶೀರ್ವಚನದ ಮಾತುಗಳನ್ನಾಡಿ ಸಂಕಿರಣಗಳಲ್ಲಿ ದೇವಸ್ಥಾನಗಳು ದೇವತಾ ಕಾರ್ಯಗಳು ನಡೆದಾಗ ದೇವರು ಪ್ರಸನ್ನರಾಗಿ ಅಲ್ಲಿರುತ್ತಾರೆ ಎಂಬ ನಮ್ಮ ನಂಬಿಕೆ ಆದ್ದರಿಂದ

ಧರ್ಮ ಚಿಂತನೆಗಳ ಕಾರ್ಯಗಳು ಪ್ರತಿ ಸಂಕಿರಣದಲ್ಲಿ ನಡೆಯುವಂತಾಗಬೇಕು ಕುಲಾಲ ಭವನದಲ್ಲಿ ನಡೆದ ಧಾರ್ಮಿಕ ಕಾರ್ಯಗಳಿಂದಾಗಿ ಮುಂಬಯಿ ಮತ್ತು ಜಿಲ್ಲೆಯ ಕುಲಾಲ ಸಮಾಜದ ಬಂಧುಗಳು ಒಗ್ಗಟ್ಟು ಬಲಿಷ್ಠವಾಗಿದೆ ಮುಂದಿನ ದಿನಗಳಲ್ಲಿ ಸಂಕಿರಣ ಪೂರ್ಣಗೊಂಡು ಸಮಾಜಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ನುಡಿದರು.

Leave a Comment