ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು “ಚಿಣ್ಣರಲೋಕ ಲೋಕದ ಕಲಾವಿದರ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಕರಾವಳಿ ಕಲೋತ್ಸವ- 2022" ಎ.29 ರಿಂದ ಮೇ.29 ರವರೆಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ ತಿಳಿಸಿದ್ದಾರೆ.
ಬುಧವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಒಂದು ತಿಂಗಳ ಕಾಲ ನಡೆಯುವ ಈ ಕಲೋತ್ಸವದಲ್ಲಿ ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ,ರಾಜ್ಯ ಮಟ್ಟದ ಪಿಲ್ಮ್ ಡ್ಯಾನ್ಸ್ ಸ್ಪರ್ಧೆ,ಜಿಲ್ಲಾ ಮಟ್ಟದ ಸಿಂಗಾರಿ ಮೇಳ ಸ್ಪರ್ಧೆ,ಜಾನಪದ ನೃತ್ಯ,ಭರತನಾಟ್ಯ,ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಎ.29 ರಂದು ಸಂಜೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಿಂದ ಗೋಲ್ಡನ್ ಪಾಕ್೯ ವರೆಗೆ ವೈಭವಪೂರ್ಣ ಮೆರವಣಿಗೆ ನಡೆಯಲಿದೆ.ಬಳಿಕ ಮೈದಾನದಲ್ಲಿ ಕೀರ್ತಿ ಶೇಷ ಡಾ. ಲಕ್ಷ್ಮೀನಾರಾಯಣ ಆಳ್ವ ವೇದಿಕೆ, ಕರಾವಳಿ ಕಲೋತ್ಸವ ಉದ್ಘಾಟನೆ, ಚಿಣ್ಣರಲೋಕ ನಿರಾಶ್ರಿತರ ಸೇವಾಶ್ರಮದ ನೀಲಿ ನಕ್ಷೆ ಅನಾವರಣ, ಚಿಣ್ಣರ ಚಿತ್ರಕಲೆ ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್ ಉದ್ಘಾಟನೆ ಹಾಗೂ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಲಿದೆ ಎಂದ ಅವರು ಇದೇ ವೇಳೆ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದಲ್ಲದೆ ಕು.ಕ್ಷಿತಿ ಕೆ.ರೈ ,ಕು.ಶೃತಿ ದೇವಾಡಿಗ ಚಿಣ್ಣರ ಸೌರಭ ರಾಜ್ಯ
ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.
ರಾಜ್ಯ ಜಾಗೃತಿಯ ನೃತ್ಯವೈವಿಧ್ಯ ಪುಣ್ಯ ಭೂಮಿ ಭಾರತ,ಕರಾವಳಿ ಸರಿಗಮಪಕಾರ್ಯಕ್ರಮ,ಯಕ್ಷ ನಾಟ್ಯ ವೈಭವ , "ಜಾನಪದ ತತ್ವ ಪದಗಳು, ಸಂಸ್ಥೆಯ 17 ವರ್ಷಗಳ ಸಾಧನೆಯ ಹೆಜ್ಜೆಗಳ ಅನಾವರಣ ಕಾರ್ಯಕ್ರಮ, ಮಾಪಿಳ್ಳೆ ಪಾಟ್,ಡ್ಯಾಮ್ಸ್ ನೈಟ್ಸ್ ಸೀಸನ್-3,ಯಕ್ಷಗಾನ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ಮೇಳೈಸಲಿದೆ ಎಂದು ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು. ಈ ಬಾರಿ ವಿಶೇಷವಾಗಿ ಸಂಸ್ಕಾರ ಭಾರತಿ ದ.ಕ.ಜಿಲ್ಲೆ ಮತ್ತು ಬಂಟ್ವಾಳ ಘಟಕದ ಆಶ್ರಯದಲ್ಲಿ ಕುಣಿತ ಭಜನಾ ಸ್ಪರ್ಧೆಯನ್ನು ಎ.30 ರಂದು ಆಯೋಜಿಸಲಾಗಿದೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಭಜನಾ ಸ್ಪರ್ಧೆ ಉದ್ಘಾಟಿಸಲಿದ್ದಾರೆ ಎಂದ ವಿವರಿಸಿದ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್,ಸಚಿವ ಎಸ್.ಅಂಗಾರ,ಶಾಸಕರಾದ ರಾಜೇಶ್ ನಾಯ್ಕ್,ಯು.ಟಿ.ಖಾದರ್,ಮಾಜಿ ಸಚಿವ ರಮಾನಾಥ ರೈ ಮೊದಲಾದ ಗಣ್ಯರು ಕರಾವಳಿ ಕಲೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್,ಚಿಣ್ಣರ ಅಧ್ಯಕ್ಷ ಜನ್ಯ ಪ್ರಸಾದ್,ನಿರ್ದೇಶಕ ಮಹಮ್ಮದ್ ನಂದಾವರ,ಮಂಜುವಿಟ್ಲ ಮಪದಲಾದವರಿದ್ದರು.














