ಮಂಗಳೂರು:ಕಳೆದ ೯ ವರ್ಷಗಳಿಂದ ಜಿಲ್ಲೆಯಾದ್ಯಂತ ಅನೇಕ ಬಡವರಿಗೆ ವಿವಿಧ ರೂಪದಲ್ಲಿ ೯೦ಕ್ಕೂ ಅಧಿಕ ಸೇವೆಗಳನ್ನು ಸಲ್ಲಿಸಿ ಇದೀಗ ವಿಶ್ವ ಗಾಣಿಗರ ಚಾವಡಿ(ರಿ.) ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ಸವಿನೆನಪಿಗಾಗಿ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಸೇವಾಯೋಜನೆಗಳ ಕಿರುಪರಿಚಯವನ್ನು ನೀಡುವ ಸಲುವಾಗಿ ಧ್ಯೇಯಗೀತೆ ರಚಿಸಲಾಗಿದೆ. ಇದರಿಂದ ಇನ್ನಷ್ಟು ಜನರನ್ನು ಯೋಜನೆ ತಲುಪುವುದರೊಂದಿಗೆ ದಾನಿಗಳಿಂದಲೂ ಉತ್ತಮ ಆರ್ಥಿಕ ಸಹಕಾರ ಒದಗಿಬರಲಿ ಎಂದು ಉಳ್ಳಾಲ ಉಳಿಯ ಶ್ರೀ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ನುಡಿದರು.
ಉಳಿಯ ಕ್ಷೇತ್ರದಲ್ಲಿ ಭಾನುವಾರ ಧ್ಯೇಯಗೀತೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ ಮಾತನಾಡಿ, ೨೦೧೪ರಲ್ಲಿ ಆರಂಭವಾದ ಈ ಟ್ರಸ್ಟ್ ಶ್ರಮದಾನದ ಮೂಲಕ ಮನೆ ನಿರ್ಮಾಣ, ಅನಾರೋಗ್ಯಪೀಡಿತರಿಗೆ, ಬಡಯುವತಿಯ ಮದುವೆಗೆ, ಬಡವರ ಮನೆ ನಿರ್ಮಾನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಉಚಿತ ಪುಸ್ತಕ ವಿತರಣೆ, ಪ್ರೋತ್ಸಾಹಧನ, ತುರ್ತು ಸಂದರ್ಭದಲ್ಲಿ ರಕ್ತದಾನ, ೧೦೦ಕ್ಕೂ ಅಧಿಕ ಸದಸ್ಯರಿಂದ ನೇತ್ರದಾನ ಮುಂತಾದ ಹತ್ತು ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಮಾ.೩ರಂದು ಕೇಂದ್ರ ಮೈದಾನದಲ್ಲಿ ಕ್ರೀಡೋತ್ಸವ ಆಯೋಜಿಸಿ ಇದರಿಂದ ಉಳಿಕೆ ಹಣವನ್ನು ಈ ಎಲ್ಲಾ ಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಉಳ್ಳಾಲ ಗಾಣಿಗ ಸಂಘ ಅಧ್ಯಕ್ಷ ಪ್ರಕಾಶ್ ಹೊಸಬೆಟ್ಟು, ಸೋಮೇಶ್ವರ ಗಾಣಿಗ
ಸಂಘ ಅಧ್ಯಕ್ಷ ರಾಮ್‌ದಾಸ್ ಬಿ., ಅಜಿತ್ ಕುಮಾರ್ ಶೆಟ್ಟಿ, ನಿವೃತ್ತ ಸೈನಿಕ ಸುನೀಲ್ ಮಂಜೇಶ್ವರ, ಉಳಿಯ ಕ್ಷೇತ್ರದ ಮೊಕ್ತೇಸರರಾದ ಯು. ರಮೇಶ್, ಪ್ರವೀಣ್ ಹೊಯ್ಗೆ, ಪ್ರೀತಮ್ ಉಳಿಯ, ಯೋಗೀಶ್ ಉಳಿಯ, ವಿಜಿಸಿ(ರಿ.) ಟ್ರಸ್ಟ್ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ಧ್ಯೇಯಗೀತೆ ರಚಿಸಿ ಕಂಠದಾನಗೈದ ವಿಜಯವಾಣಿ ಪತ್ರಿಕೆ ಸಿಬ್ಬಂದಿ ದೇವಿಪ್ರಸಾದ್ ಎಂ ದೇವಂದಬೆಟ್ಟು, ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ಡಿ ಶಂಭೂರು, ಸದಸ್ಯರಾದ ಹರಿಶ್ಚಂದ್ರ ಶಕ್ತಿನಗರ, ಗಾಯತ್ರಿ ಬಂಗೇರ, ಯತೀನ್‌ರಾಜ್ ಪೊಳಲಿ, ದೀಕ್ಷಿತ್ ಮಂಜೇಶ್ವರ, ಮಿಥುನ್ ಸುವರ್ಣ ಕುಂಪಲ, ಅಕ್ಷಿತಾ ಮಿಥುನ್ ಕುಂಪಲ ಮತ್ತಿತರರಿದ್ದರು.
ಜ.೨೯ರಂದು ರಾತ್ರಿ ೯.೨೫ಕ್ಕೆ ಧ್ಯೇಯಗೀತೆ ದೇವಲೋಕ ಯೂಟ್ಯೂಬ್ ಚಾನಲ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.














