ಬೊಂಡಾಲ:ಶ್ರೀಮಹಾಗಣಪತಿ ದೇವಸ್ಥಾನ, ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ 32ನೇ ವರ್ಷದ ಯಕ್ಷಗಾನ ಬಯಲಾಟ,ಧಾರ್ಮಿಕ ಸಭಾ ಕಾರ್ಯಕ್ರಮ.

Coastal Bulletin
ಬೊಂಡಾಲ:ಶ್ರೀಮಹಾಗಣಪತಿ ದೇವಸ್ಥಾನ, ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ 32ನೇ ವರ್ಷದ ಯಕ್ಷಗಾನ ಬಯಲಾಟ,ಧಾರ್ಮಿಕ ಸಭಾ ಕಾರ್ಯಕ್ರಮ.

ಬಂಟ್ವಾಳ: ಶ್ರೀಮಹಾಗಣಪತಿ ದೇವಸ್ಥಾನ ಬೊಂಡಾಲ ಇದರ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ, ಬೊಂಡಾಲ ಇದರ 32ನೇ ವರ್ಷದ ಸೇವೆ ಯಕ್ಷಗಾನ ನಗರಾಶ್ವಮೇಧ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಡಿ.27 ರಂದು ಬುಧವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ ಮಾತನಾಡಿ, ಹಿಂದೂ ಧಾರ್ಮಿಕ ವಿಚಾರಗಳನ್ನು ತಿಳಿಸುವ ದೃಷ್ಟಿಯಿಂದ ಮತ್ತು ಹಿಂದೂ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ದೇವಸ್ಥಾನಗಳ ಉದ್ದೀಪನ ವಾಗಬೇಕಿದೆ.ದೇವಸ್ಥಾನದ ನಿರ್ಮಾಣದ ಬಳಿಕ ಗ್ರಾಮದ ಭಕ್ತರು ದೇವಸ್ಥಾನಕ್ಕೆ ನಿತ್ಯ ಬರಬೇಕೆಂದು ತಿಳಿಸಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಗ್ರಾಮೀಣ ಭಾಗದಲ್ಲಿ ರುವ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆದಿದೆ.ಅ ಬಳಿಕ ದೇವಸ್ಥಾನದ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಅದರಲ್ಲಿ ದೇವಸ್ಥಾನದ ಬ್ರಹ್ಮಕಲಶದ

ವಿಜ್ಞಾಪನಾ ಪತ್ರದಲ್ಲಿ ತಿಳಿಸಿದಂತೆ ಅರ್ಚಕರ ಮನೆ ನಿರ್ಮಾಣ ಆಗಬೇಕಾಗಿದೆ.ಆರ್ಥಿಕ ಮುಗ್ಗಟ್ಟಿನಿಂದ ಕಾರ್ಯ ಈವರೆಗೆ ನಡೆದಿಲ್ಲ,ಹಾಗಾಗಿ ಅರ್ಚಕರ ಮನೆ ನಿರ್ಮಾಣದ ಕಾರ್ಯದಲ್ಲಿ ಭಕ್ತರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

 ಮುಖ್ಯ ಅತಿಥಿಗಳಾಗಿ ಮಾವಂತೂರು ಶ್ರೀ ಬಲವಾಂಡಿ ದೇವಸ್ಥಾನದ ಗಡಿಕಾರರು ದುರ್ಗಾದಾಸ್ ಶೆಟ್ಟಿ, ಇಂಜಿನಿಯರ್ ಶಿವಪ್ರಸಾದ್ ಕೊಟ್ಟಾರಿ, ಉದ್ಯಮಿಗಳಾದ ಜಯಪದ್ಮ ಎ.ಬೆಂಗಳೂರು, ಶ್ರೀನಿವಾಸ ಪೂಜಾರಿ ಮೆಲ್ಕಾರ್,ದಾಮೋದರ ಶೆಟ್ಟಿ ಪುಣೆ, ಬೊಂಡಾಲ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಜಯರಾಮ ಹೊಳ್ಳ ನಾಗ್ತಿಮಾರು ಉಪಸ್ಥಿತರಿದ್ದರು

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿ.ನಾಗೇಶ್ ಶೆಟ್ಟಿ ಬೊಂಡಾಲ ವಂದಿಸಿದರು.ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

Leave a Comment