ಬೆಳ್ತಂಗಡಿ : ಸ್ನಾನಕ್ಕೆಂದು ನದಿಗಿಳಿದ ಯುವಕರು ನೀರುಪಾಲು

Coastal Bulletin
ಬೆಳ್ತಂಗಡಿ : ಸ್ನಾನಕ್ಕೆಂದು ನದಿಗಿಳಿದ ಯುವಕರು ನೀರುಪಾಲು

ಬೆಳ್ತಂಗಡಿ : ಕಾರ್ಯಕ್ರಮಕ್ಕೆಂದು ಬಂದ ಯುವಕರು ಊಟದ ಬಳಿಕ ನದಿಗೆ ಸ್ನಾನಕ್ಕೆ ಹೋದ ಮೂವರು ಯುವಕರು ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ವಾಲ್ಟ‌ರ್ ಎಂಬವರ ಮನೆಗೆ ಕಾರ್ಯಕ್ರಮದ ನಿಮಿತ್ತ ಬಂದಿರುವ ಮೂಡಬಿದ್ರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19), ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಎಂಬವರು ನ.27 ರಂದು ಊಟ ಮೂಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ

ಬಳಿ ಸ್ನಾನ ಮಾಡಲು ಹೋಗಿದ್ದು ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರು ಪಾಲಾಗಿದ್ದಾರೆ. ಮೂವರ ಮೃತದೇಹ ನೀರಿನಿಂದ ಹೊರತೆಗೆಯಲಾಗಿದ್ದು ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮೂವರೂ ಕೂಡ ಮಂಗಳೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.

Leave a Comment