ಬಾಬುಗುಡ್ಡ: ಮೈತ್ರಿ ಸ್ತ್ರಿಶಕ್ತಿ ಸಂಘ ದಶಮಾನೋತ್ಸವ ಸಂಭ್ರಮ ಹಾಗೂ ಮಕ್ಕಳ ದಿನಾಚರಣೆ

Coastal Bulletin
ಬಾಬುಗುಡ್ಡ: ಮೈತ್ರಿ ಸ್ತ್ರಿಶಕ್ತಿ ಸಂಘ ದಶಮಾನೋತ್ಸವ ಸಂಭ್ರಮ ಹಾಗೂ ಮಕ್ಕಳ ದಿನಾಚರಣೆ

ಮಂಗಳೂರು :ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವ್ರದ್ದಿ ಯೋಜನೆ ಮಂಗಳೂರು ನಗರ ಮೈತ್ರಿ ಸ್ರೀ ಶಕ್ತಿ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಅಂಗನವಾಡಿ ಕೇಂದ್ರ ಅತ್ತಾವರ ಬಾಬುಗುಡ್ಡ ಮಕ್ಕಳ ದಿನಾಚರಣೆ ಕಾರ್ಯಕ್ರಮವು ನ.25 ರಂದು ಸೋಮವಾರ ಕುದ್ಮುಲ್ ರಂಗರಾವ್ ಸಭಾಭವನ ಬಾಬುಗುಡ್ಡ ಇಲ್ಲಿ ಜರಗಿತು.

ಬಿ.ಆರ್ ಹೃದಯನಾಥ್ ಅಧ್ಯಕ್ಷರು ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಬಾಬುಗುಡ್ಡ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ವೇತಾ .ಯನ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಂಗಳೂರು ನಗರ ಅಧ್ಯಕ್ಷತೆ ವಹಿಸಿ ಮೈತ್ರಿ ಸ್ತ್ರಿಶಕ್ತಿ ಸಂಘದ ಕಾರ್ಯವನ್ನು ಶ್ಲಾಘಿಸಿದರು

ಶ್ಯಾಮ ಕರ್ಕೇರ ಉಪಾಧ್ಯಕ್ಷರು ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಬಾಬುಗುಡ್ಡ , ಶಬರಿ ಭಂಡಾರಿ ಅಧ್ಯಕ್ಷರು ಇನ್ನಾರ್ ವೀಲ್ ಕ್ಲಭ್ ಮಂಗಳೂರು, ಸಿಡ್ನಿ ಸಂಜೀವನ್ ಉದ್ಯಮಿಗಳು ಕುವೈಟ್ , ಅನುಪಮ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನೆ ಪಾಂಡೇಶ್ವರ ವಲಯ ಅರ್ಚನಾ ರೈ ಅಧ್ಯಕ್ಷರು ಬಾಲವಿಕಾಸ ಸಮಿತಿ, ಕಲಾವತಿ ಸದಸ್ಯರು ಇನ್ನರ್ ವೀಲ್

ಕ್ಲಬ್ ಮಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೈತ್ರಿ ಸ್ತ್ರಿಶಕ್ತಿ ಸಂಘ ಅಧ್ಯಕ್ಷರಾದ ವಿದ್ಯಾ ದೇವದಾಸ್ ಉಳ್ಳಾಲ್, ಕಾರ್ಯದರ್ಶಿ ಶೀಲಾವತಿ ಹಾಗೂ ನೆಹರು ಆಗಿ ಅಂಗನವಾಡಿ ವಿದ್ಯಾರ್ಥಿ ಮಾಸ್ಟರ್ ಪ್ರಥ್ವಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ವಿದ್ಯಾರ್ಥಿಗಳ ಛದ್ಮವೇಷ ಸ್ಪರ್ಧೆ ಜರಗಿತು . ಸಂಘದ ಸದಸ್ಯರುಗಳು ಹಾಗೂ ಅಂಗನವಾಡಿ ಪುಟಾಣಿಗಳು ಮತ್ತು ಹೆತ್ತವರು ಉಪಸ್ಥಿತರಿದ್ದರು

ಮೈತ್ರಿ ಸ್ತ್ರಿಶಕ್ತಿ ಸಂಘದ ಸದಸ್ಯೆ ವಿಜಯಲಕ್ಷ್ಮಿ ಕೆ.ಬಿ.ಕೆ ಸ್ವಾಗತಿಸಿದರು. ಅಧ್ಯಕ್ಷರಾದ ವಿದ್ಯಾ ದೇವದಾಸ್ ಉಳ್ಳಾಲ್ ವರದಿ ವಾಚಿಸಿದರು, ಅಂಗನವಾಡಿ ಶಿಕ್ಷಕಿ ಸುಜಾತ ಶೆಟ್ಟಿ ಧನ್ಯವಾದವಿತ್ತರು. ಬಾಲವಿಕಾಸ ಸಮಿತಿ ಸದಸ್ಯರಾದ ರಘುವೀರ್ ಬಾಬುಗುಡ್ಡ ಕಾರ್ಯಕ್ರಮ ನಿರೂಪಿಸಿದರು

Leave a Comment