ಬಂಟ್ವಾಳ: ಅಯ್ಯಪ್ಪ ಭಕ್ತವೃಂದ, ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ ಹಾಗೂ ಅಯ್ಯಪ್ಪ ದೀಪೋತ್ಸವ ಸಮಿತಿ, ಮಂಚಿ ಕುಕ್ಕಾಜೆ ಇರಾ ಇಲ್ಲಿನ ಅಯ್ಯಪ್ಪ ವೃತಧಾರಿಗಳ 50ನೆ ವರ್ಷದ ವೃತಾಚರಣೆ ಹಿನ್ನಲೆಯಲ್ಲಿ ಅಯ್ಯಪ್ಪ ದೀಪೋತ್ಸವ, ಅಪ್ಪ ಸೇವೆ, ಕೆಂಡ ಸೇವೆ ಡಿ.28 ರಂದು ಕುಕ್ಕಾಜೆ ಸಿದ್ದಿವಿನಾಯಕ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ ಎಂದು ಅಯ್ಯಪ್ಪ ದೀಪೋತ್ಸವ ಸಮಿತಿ ಅಧ್ಯಕ್ಷ ಮಾದವ ಮಾವೆ ತಿಳಿಸಿದರು.
ಅವರು ಬಿ ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಬೆಳಗ್ಗೆ 6.30 ರ ವೇಳೆಗೆ ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ ಭಜನಾ ಸೇವೆ, ಗಣಹೋಮ, ಗುರುವಂದನಾ ಕಾರ್ಯಕ್ರಮ, ಸಂಜೆ ಭಜನಾ ಮಂಗಲ, ದೀಪೋತ್ಸವ, ಅಪ್ಪ ಸೇವೆ, ಕೆಂಡಸೇವೆ,ಮಹಾಪೂಜೆ, ಪ್ರಸಾದ ವಿತರಣೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ಹಾಗೂ ಬೊಲ್ಪು ಕಲಾ ತಂಡ (ರಿ.) ಮಂಚಿ ಇವರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ,
ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ, ನಡೆಯಲಿದೆ ಎಂದರು.
ಅಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಉದಯ ಗುರುಸ್ಚಾಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ , ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ರಮೇಶ್ ರಾವ್ ಪತ್ತುಮುಡಿ, ಗುರುಸ್ವಾಮಿ ಸಂಜೀವ ಆಚಾರ್ಯ,ಸದಾಶಿವ ಆಚಾರ್ಯ, ಗುರುಸ್ವಾಮಿ ಕೃಷ್ಣಪ್ಪ ಬೆಳ್ಚಾಡ ಉಪಸ್ಥಿತರಿದ್ದರು.















