ಬಂಟ್ವಾಳ : ಸಮಾಜದಲ್ಲಿ ವಿದ್ಯಾರ್ಥಿಗಳು ಉತ್ತಮ ನಾಗರಿಕನಾಗಬೇಕಾದರೆ ಪೋಷಕರ ಪಾತ್ರ ಬಹಳ ಮುಖ್ಯ ಅಲ್ಲದೆ ತಾಳ್ಮೆ, ಆತ್ಮವಿಶ್ವಾಸ, ಸಮಯ ಪಾಲನೆ ,ಶಿಸ್ತು, ಏಕಾಗ್ರತೆ ಮುಂತಾದ ಮಹೋನ್ನತ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಗುರಿಯನ್ನು ತಲುಪಲು ಸಾಧ್ಯ ಎಂದು ಅತಿಥಿಗಳಾಗಿ ಭಾಗವಹಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಇಲ್ಲಿಯ ಹಿಂದಿ ಅಧ್ಯಾಪಕಿ ಗೀತಾ ಕುಮಾರಿ ಎನ್ ವಿ ಹೇಳಿದರು.
ಅವರು ಅ. 22ರಂದು ಶನಿವಾರ ದೀಪಿಕಾ ಪ್ರೌಢ ಶಾಲೆ, ಮೊಡಂಕಾಪು ಇಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ಫಾದರ್ ವಿಕ್ಟರ್ ಡಿಸೋಜ ರವರು ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಲ್ಲಾ ಹೆತ್ತವರ ಸಹಕಾರವನ್ನು ಕೇಳುತ್ತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವಚನ ನೀಡಿದರು.
ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮಹಮ್ಮದ್ ವಳವೂರು ಮತ್ತು ಜಾನ್ ಗೊಮ್ಸ್ ಶಾಲಾ ಮುಖ್ಯ ಶಿಕ್ಷಕ ಸಾಧು ಅವರು ಉಪಸ್ಥಿತರಿದ್ದರು.
ಬಳಿಕ ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು
2026- 27 ನೇ ಸಾಲಿನಿಂದ ಅಧ್ಯಕ್ಷರಾಗಿ ಚಂಚಲ, ಉಪಾಧ್ಯಕ್ಷರಾಗಿ ಸಾವುಲ್ ಹಮೀದ್, ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಲ್ಲಿಕಾ, ಜೊತೆ ಕಾರ್ಯದರ್ಶಿಯಾಗಿ ನಝೀಮಾ ,ಕ್ರೀಡಾ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್, ಸಂಘಟನಾ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಲೋಲಾಕ್ಷಿ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ಪ್ರಫುಲ್ಲ ಸಲ್ದಾನ ಇವರು ಸರ್ವರನ್ನು ಸ್ವಾಗತಿಸಿದರು ಕಾರ್ಯಕ್ರಮವನ್ನು ಹಿರಿಯ ಶಿಕ್ಷಕರಾದ ತಿಪ್ಪೇಸ್ವಾಮಿ ಆರ್ ಇವರು ನಿರೂಪಿಸಿದರು ಸವಿತಾ ಇವರು ಸರ್ವರನ್ನು ವಂದಿಸಿದರು.















