ಕೊಯಿಲ: ಮಹಾಚಂಡಿಕಾಯಾಗ ಸಭೆ, ಮಹಿಳಾ ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಣೆ.

Coastal Bulletin
ಕೊಯಿಲ: ಮಹಾಚಂಡಿಕಾಯಾಗ ಸಭೆ, ಮಹಿಳಾ ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಣೆ.

ಬಂಟ್ವಾಳ: ಇಲ್ಲಿನ ಕೊಯಿಲ ಹನುಮಾನ್ ನಗರದಲ್ಲಿ ರಾಯಿ ಕೊಯಿಲ ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ.14ರಂದು 'ಮಹಾಚಂಡಿಕಾಯಾಗ-ರಾಮತಾರಕ ಮಂತ್ರ ಹೋಮ' ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಎಂ.ದುಗರ್ಾದಾಸ್ ಶೆಟ್ಟಿ ಮಾವಂತೂರು ಹೇಳಿದ್ದಾರೆ.

ಕೊಯಿಲ ಹನುಮಾನ್ ನಗರದಲ್ಲಿ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಕಟೀಲು ಮೇಳದಿಂದ 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.ಇದೇ ವೇಳೆ ಮಹಿಳಾ ಕಾರ್ಯಕರ್ತೆಯರಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.

ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ, ಸಮಿತಿ ಅಧ್ಯಕ್ಷ ಪ್ರವೀಣ ಅಂಚನ್ ಕೊಯಿಲ,

ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಧುಕರ ಬಂಗೇರ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.

ಪ್ರಮುಖರಾದ ವಸಂತ ಗೌಡ ಮುದ್ದಾಜೆ, ಕೆ.ಪರಮೇಶ್ವರ ಪೂಜಾರಿ ರಾಯಿ, ಕೃಷ್ಣಪ್ಪ ಪೂಜಾರಿ ಕಾರಂಬಡೆ, ಜಿ.ದಾಮೋದರ ಬಂಗೇರ, ಬಿ.ದಯಾನಂದ ಸಪಲ್ಯ, ರಾಘವ ಅಮೀನ್, ಮೋಹನ್ ಕೆ.ಶ್ರೀಯಾನ್, ಮನೋಹರ ಕೊಯಿಲ, ಸತೀಶ ಬೊಲ್ಪೊಟ್ಟು, ಚಂದಪ್ಪ ಪೂಜಾರಿ ಮಾಬೆಟ್ಟು, ಚಂದ್ರಶೇಖರ ಸಪಲ್ಯ, ವಸಂತ ಪೂಜಾರಿ ಕೈತ್ರೋಡಿ, ಪ್ರಮೋದ್ ಕೈತ್ರೋಡಿ ಮತ್ತಿತರರು ಇದ್ದರು.

ಟ್ರಸ್ಟಿ ಹರೀಶ ಆಚಾರ್ಯ ರಾಯಿ ಸ್ವಾಗತಿಸಿ, ಸಮಿತಿ ಉಪಾಧ್ಯಕ್ಷ ಭೋಜ ಶೆಟ್ಟಿ ಹೋರಂಗಳ ವಂದಿಸಿದರು.

Leave a Comment