ಬಂಟ್ವಾಳ: ಇಲ್ಲಿನ ಪ್ರಸಿದ್ಧ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಂಬಾ ದೇವಸ್ಥಾನಕ್ಕೆ ದೇವಾಡಿಗ ಸಮಾಜದ ವತಿಯಿಂದ ಸಲ್ಲಿಸಲಾಗುವ ನೂತನ ರಥ ಸಮರ್ಪಣಾ ಸಮಿತಿಗೆ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಆಯ್ಕೆಯಾಗಿದ್ದಾರೆ.
ಈಗಾಗಲೇ ಪೊಳಲಿ ಕ್ಷೇತ್ರಕ್ಕೆ ಆಕರ್ಷಕ ಷಷ್ಠಿ ರಥ ಕೊಡುಗೆ ನೀಡಿದ ದೇವಾಡಿಗ ಸಮಾಜವು ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿರುವ ನಂದಾವರ ಕ್ಷೇತ್ರಕ್ಕೆ ನೂತನ ರಥ ಸಮರ್ಪಿಸಲು ಗುರುವಾರ ಮರ ಕೆತ್ತನೆ ಮುಹೂರ್ತ ನೆರವೇರಿಸಿದರು.
ಮಾಗಣೆ ತಂತ್ರಿ ಸುಬ್ರಹ್ಮಣ್ಯ
ಭಟ್ ಮತ್ತು ಪ್ರಧಾನ ಅರ್ಚಕ ಮಹೇಶ್ ಭಟ್ ಮಾರ್ಗದರ್ಶನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನೆರವೇರಿಸಿದರು. ಇದೇ ವೇಳೆ ಶಿಲ್ಪಿ ಪೊಳಲಿ ಗಣೇಶ ಆಚಾರ್ಯ ಇವರಿಗೆ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ್ ವೀಳ್ಯ ನೀಡಿದರು.















