ಉಳ್ಳಾಲ: ನಕಲಿ ಆರ್ ಟಿಪಿಸಿಆರ್ ಸರ್ಟಿಫಿಕೇಟ್ ತೋರಿಸಿ ಕರ್ನಾಟಕಕ್ಕೆ ಬಂದಿದ್ದ ಕಾಸರಗೋಡಿನ ನಾಲ್ಕು ಜನರನ್ನು ಉಳ್ಳಾಲ ಪೊಲೀಸರು ತಲಪಾಡಿ ಗಡಿಭಾಗದಲ್ಲಿ ಬಂಧಿಸಿದ್ದಾರೆ.
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ನಡುವಿನ ಗಡಿ ಪ್ರದೇಶವಾದ ತಲಪಾಡಿ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದು RTPCR ರಿಪೋರ್ಟ್ ಇದ್ದವರನ್ನು ಮಾತ್ರ ಮಂಗಳೂರು ಪ್ರವೇಶ ಕಲ್ಪಿಸಲಾಗಿದೆ.
ಈ ವೇಳೆ ನಕಲಿ RTPCR ಪರೀಕ್ಷೆ ವರದಿ
ತೋರಿಸಿ ಕರ್ನಾಟಕ ಪ್ರವೇಶಿಸಿದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್, ಹನೀನ್, ಕಡಪುರ ನಿವಾಸಿ ಇಸ್ಮಾಯಿಲ್, ಚೆಂಗಳ ನಿವಾಸಿ ಅಬ್ದುಲ್ ತಮೀಮ್ ಎಂಬ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿ ಎಪಿಡಮಿಕ್ ಆಕ್ಟ್, ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ.














