ಕೊಡ್ಮಾಣ್: ಮಾ 02-03, ಕೊರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ.

Coastal Bulletin
ಕೊಡ್ಮಾಣ್: ಮಾ 02-03, ಕೊರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ.

ಬಂಟ್ವಾಳ :ಕೊಡ್ಮಾಣ್ ಶ್ರೀ ಕೊರ್ದಬ್ಬು ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಮಾ 02 ಶನಿವಾರ ಹಾಗೂ 03ರ ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಮಾ.2ರಂದು ಶನಿವಾರ ಬೆಳಿಗ್ಗೆ 9ಕ್ಕೆ ಶ್ರೀ ಕೊರ್ದಬ್ಬು ತನ್ನಿಮಾನಿಗೆ ಮತ್ತು ಸಪರಿವಾರ ದೈವಗಳ ಭಂಡಾರ ಬರುವುದು.10ರಿಂದ ಬ್ರಹ್ಮಶ್ರೀ ವೇದಮೂರ್ತಿ ಸುಜೀರ್ ಗಣೇಶ್ ಭಟ್ ನೇತೃತ್ವದಲ್ಲಿ ದೇವಸ್ಥಾನದ ವೈದಿಕ ಕಾರ್ಯಕ್ರಮ,ಗಣಹೋಮ, ಕಲಶಾಭಿಷೇಕ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 10ರಿಂದ ಶ್ರೀ ಕೊರ್ದಬ್ಬು

ತನ್ನಿಮಾನಿಗ ದೈವಗಳ ನೆಮೋತ್ಸವ ನಡೆಯಲಿದೆ.

ಮಾ.03ರಂದು ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ಚಾಮುಂಡಿ ಗುಳಿಗ ದೈವಗಳ ಗಗ್ಗರ ಸೇವೆ, ಸಂಜೆ 7.30ಯಿಂದ ಪಂಜುರ್ಲಿ ಗುಳಿಗ ದೈವಗಳ ಗಗ್ಗರ ಸೇವೆ, ರಾತ್ರಿ 1ಗಂಟೆಯಿಂದ ರಾಹುಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ.ಮಾ 4ರಂದು ಸೋಮವಾರ ಭಂಡಾರ ಇಳಿಯಲಿದೆ.

Leave a Comment