ಬಂಟ್ವಾಳ :ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ), ತುಂಬೆ, ರಕ್ಷಕ-ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿಗಳು,ಹಾಗೂ ಶಾಲಾಭಿಮಾನಿಗಳು, ಪದವಿ ಪೂರ್ವ ಕಾಲೇಜು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕನ್ನಡ ಮಾಧ್ಯಮ ಪ್ರೌಢಶಾಲೆ ತುಂಬೆ ಇದರ ಸಹಭಾಗಿತ್ವದಲ್ಲಿ, ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 32 ವರ್ಷಗಳಿಂದ ನಿಸ್ವಾರ್ಥ ಹಾಗೂ ನಿಷ್ಕಳಂಕವಾಗಿ ಸೇವೆಗೈದು ಇದೀಗ ನಿವೃತ್ತರಾಗುವ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವರ ಸೇವಾ ನಿವೃತ್ತಿ, ಬೀಳ್ಕೊಡುಗೆ ಸಮಾರಂಭ "ಗಂಗಾಭಿನಂದನೆ" ಕಾರ್ಯಕ್ರಮವು ಮಾ.02ರಂದು ಶನಿವಾರ ಅಪರಾಹ್ನ ಗಂಟೆ 3-30ಯಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ವಹಿಸಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ತುಂಬೆ ಗ್ರೂಪ್ ಹಾಗೂ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸಂಸ್ಥಾಪಕ ಡಾ. ತುಂಬೆ ಮೊಯಿದ್ದೀನ್ ಸಹಿತ ಹಲವಾರು ಗಣ್ಯ
ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 3ಗಂಟೆಗೆ ತುಂಬೆ ಜಂಕ್ಷನ್ನಿಂದ ತೆರೆದ ವಾಹನದಲ್ಲಿ ಕೆ. ಎನ್. ಗಂಗಾಧರ ಆಳ್ವರನ್ನು ಗೌರವಪೂರ್ವಕವಾಗಿ ಮೆರವಣಿಗೆಯ ಮೂಲಕ ಸಮಾರಂಭದ ಸ್ಥಳಕ್ಕೆ ಬರಮಾಡಿಕೊಳ್ಳುವುದಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ









