ಮಂಗಳೂರು :ಉಳಾಯಿಬೆಟ್ಟು ಗ್ರಾಮದ ಪ್ರೀತಿ ಗೇಮ್ಸ್ ಕ್ಲಬ್ ಪೆರ್ಮಂಕಿ ಇದರ 41ನೇ ವಾರ್ಷಿಕೋತ್ಸವ ಸಮಾರಂಭವು ಫೆ.24 ರಂದು ಶನಿವಾರ ಪೆರ್ಮಂಕಿ ಕ್ಲಬ್ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ಗಣ ಹೋಮ, ಸ್ಥಳೀಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಶನೇಶ್ವರ ಪೂಜೆ ಮತ್ತು ಅನ್ನ ಸಂತರ್ಪಣೆ ಜರಗಿತು.
ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಪದ್ಮನಾಭ ಶೆಟ್ಟಿ ಉದ್ಘಾಟಿಸಿದರು. ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ ಮಾತನಾಡಿ, ಸೌಹಾರ್ದಯುತವಾಗಿ ಒಗ್ಗಟ್ಟಿನಿಂದ, ಸಮಾಜಮುಖಿ ಚಿಂತನೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಸಂಘದ ಕೆಲಸದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ಇವರು ಸಂಘದ ಶಿಸ್ತು, ಅಭಿವೃದ್ಧಿ ಮತ್ತು ಸಮಾಜದ ಒಳಿತಿಗಾಗಿ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಉಳಾಯಿಬೆಟ್ಟು ಗ್ರಾ ಪಂ ಅಧ್ಯಕ್ಷ ಹರಿಕೇಶ್ ಶೆಟ್ಟಿ ಮಾತನಾಡಿ,ಪಂಚಾಯಿತಿಗೆ ಹಲವು ಪ್ರಶಸ್ತಿಗಳು ಲಭಿಸಲು ಸಂಘವು ನೀಡಿದ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು
ಎಂ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ನಿವೃತ್ತ ಯೋಧ ವಿನೋಧರ ಪಡು ಮತ್ತು ಡಾ.ರಿತೇಶ್ ಪಕ್ಕಳ ಪೆರ್ಮಂಕಿ ಗುತ್ತು ಇವರನ್ನು ಸನ್ಮಾನಿಸಲಾಯಿತು .
ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ಸಮಾರಂಭದಲ್ಲಿ ಎನ್. ರವಿರಾಜ್ ರಾವ್, ರತ್ನ ಸುರೇಶ್, ದಿನೇಶ್ ಪೆರ್ಮಂಕಿ, ಶ್ರೀಧರ ಪೂಜಾರಿ ಬೇಟೆಮಾರು, ವಿಲಿಯಂ ಮೋರಾಸ್, ಅಂಥೋನಿ ಡಿಸೋಜಾ, ಕೀರ್ತನ್ ಶೆಟ್ಟಿ, ಶರೀಫ್ ಕಣಿಬೆಟ್ಟು , ಸಂತೋಷ್ ಶೆಟ್ಟಿ, ಹರಿಪ್ರಸಾದ್ ಪಂಡಿತ್, ಪ್ರಶಾಂತ್ ಸಲ್ದಾನ ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ಶ್ರೀನಾಥ್ ಸಾಲ್ಯಾನ್ ವರದಿ ವಾಚಿಸಿದರು,ಸುನಿಲ್ ಕುಮಾರ್ ಸ್ವಾಗತಿಸಿದರು. ಸುದರ್ಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಶಾರದಾ ಆರ್ಟ್ಸ್ ಮಂಜೇಶ್ವರ ಇವರ ಕಥೆ ಎಡ್ಡೆಂದು ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕವು ಪ್ರದರ್ಶನಗೊಂಡು ಜನಮನ ರಂಜಿಸಿತು









