breaking news

ಬಿ ಸಿ ರೋಡ್ :ದ್ವೇಷ ಭಾಷಣ ತಡೆ ಕಾಯ್ದೆ ವಿರೋಧಿಸಿ ಬಿ ಜೆ ಪಿ ಪ್ರತಿಭಟನೆ.

Coastal Bulletin
ಬಿ ಸಿ ರೋಡ್ :ದ್ವೇಷ ಭಾಷಣ ತಡೆ ಕಾಯ್ದೆ ವಿರೋಧಿಸಿ ಬಿ ಜೆ ಪಿ ಪ್ರತಿಭಟನೆ.

ಬಂಟ್ವಾಳ: ಬಿಜೆಪಿ ಮಂಡಲ ವತಿಯಿಂದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ತಡೆ ಕಾಯ್ದೆ ವಿರೋಧಿಸಿ ಬಿ ಸಿ ರೋಡಿನಲ್ಲಿ ಡಿ. 25ರಂದು ಪ್ರತಿಭಟನೆ ನಡೆಯಿತು.

ಪಕ್ಷ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ನಾವು ಪ್ರೀತಿಯನ್ನು ಬಿತ್ತುವವರು ದ್ವೇಷವನ್ನಲ್ಲ, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ಕತ್ತಲೆಗೆ ತಲ್ಲಿರುವ ಕಾಂಗ್ರೆಸ್ ಸರಕಾರ ಹಿಂದೂ ದಮನ ನೀತಿ ಅನುಸರಿಸುತಿದೆ, ಬಿಜೆಪಿ ಯಾವತ್ತೂ ದ್ವೇಷರಾಜಕಾರಣ ಮಾಡಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂದರು.

ಪ್ರಮುಖರಾದ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ,ಭಾರತ್ ಮಾತಾ ಕೀ ಜೈ ಎನ್ನುವುದು ದ್ವೇಷ ಭಾಷಣವೇ..?ಕಾಂಗ್ರೆಸ್ ಕತ್ತರಿಯ ಕೆಲಸ ಮಾಡುತ್ತಿದೆ, ಭಾರತ ನಕಲಿ ಗಾಂಧಿಗಳ ದೇಶ ಅಲ್ಲ, ಭಾರತೀಯರ ದೇಶ, ದ್ವೇಷ ಭಾಷಣ ಕಾಯ್ದೆಯ ಮೂಲಕ‌ ಬಿಜೆಪಿಯನ್ನು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.

ಸಂದೇಶ್ ಶೆಟ್ಟಿ ಮಾತನಾಡಿ ಸನಾತನ ಸಂಸ್ಕೃತಿ, ಪರಂಪರೆಯನ್ನು ಘಾಸಿಗೊಳಿಸಿ

ಹಿಂದುಗಳನ್ನು ಒಡೆಯುವ ಕುಟಿಲ ನೀತಿ ಕಾಂಗ್ರೆಸ್ ಸರಕಾರ ಮಾಡುತ್ತಿದೆ, ಹಿಂದೂಗಳ ವಿಭಜನೆ ಮಾಡುವ ಮತ್ತು ದಮನ ಮಾಡುವ ಕಾಯ್ದೆಗಳನ್ನು ತರುವ ಕೆಲಸ ಕಾಂಗ್ರೇಸ್ ನಿರಂತರ ಮಾಡುತ್ತಿದೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಪ್ರತ್ಯುತ್ತರ ನೀಡಲಿದೆ ಎಂದರು 

ವಿಕಾಸ್ ಪುತ್ತೂರು ಮಾತನಾಡಿ, ಕಾಂಗ್ರೆಸ್ ಬೆಂಬಲಿತ ರಾಜ್ಯ ಸರಕಾರದ ಆಡಳಿತ ಸಂಪೂರ್ಣ ವಿಪಲವಾಗಿದೆ, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ದ ಮಾತನಾಡುವವರನ್ನು ಬಗ್ಗುಬಡಿಯುವುದು ಸಿದ್ದರಾಮಯ್ಯ ಸಾಧನೆಯಾಗಿದೆ ಎಂದರು

ಪ್ರತಿಭಟನೆಯಲ್ಲಿ ಪ್ರಮುಖರಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಮದಾಸ್ ಬಂಟ್ವಾಳ, ಡೊಂಬಯ್ಯ ಅರಳ ಸಹಿತ ಪಕ್ಷ ಪ್ರಮುಖರು ಕಾರ್ಯಕರ್ತರು ಇದ್ದರು. ಮಂಡಲದ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿ,ಪ್ರ. ಕಾರ್ಯದರ್ಶಿ ಸುದರ್ಶನ್ ಬಜ ಕಾರ್ಯಕ್ರಮ ನಿರೂಪಿಸಿದರು

Leave a Comment