ಬಂಟ್ವಾಳ :ಸೇವಾ ಭಾರತಿ ಅಶ್ರಯದಲ್ಲಿ ಗೋಕುಲೋತ್ಸವ‌ ಕಾರ್ಯಕ್ರಮ. ಸಮಾಜ ಪ್ರೇಮಿ ಆಂದೋಲನವೇ ಬಾಲಗೋಕುಲ: ಸುಭಾಶ್ಚಂದ್ರ ಕಳಂಜ

Coastal Bulletin
ಬಂಟ್ವಾಳ :ಸೇವಾ ಭಾರತಿ ಅಶ್ರಯದಲ್ಲಿ ಗೋಕುಲೋತ್ಸವ‌ ಕಾರ್ಯಕ್ರಮ. ಸಮಾಜ ಪ್ರೇಮಿ ಆಂದೋಲನವೇ ಬಾಲಗೋಕುಲ: ಸುಭಾಶ್ಚಂದ್ರ ಕಳಂಜ

ಅವರು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸೇವಾ ಭಾರತಿ ಬಂಟ್ವಾಳ ತಾಲೂಕು ಗೋಕುಲೋತ್ಸವ ಸಮಿತಿ ವತಿಯಿಂದ ಏರ್ಪಡಿಸಲಾದ ತಾಲೂಕಿನ ಬಾಲಗೋಕುಲಗಳ ಸಮ್ಮಿಲನ ಗೋಕುಲೋತ್ಸವ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಚಾಲಕ ಯಶವಂತ ಮುಲ್ಕಿ,ಸೇವಾ ಭಾರತಿ ಟ್ರಸ್ಟ್ ನ,ಜಿ.ಕೆ.ಭಟ್,ಪಿ.ಕೆ.ಪದ್ಮನಾಭ ಉಪಸ್ಥಿತರಿದ್ದರು.

ಪೂರ್ವಾಹ್ನ ಭವ್ಯ ಶೋಭಾಯಾತ್ರೆಗೆ ಬಿಸಿರೋಡು ಕೈಕಂಬದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಬಳಿಕ ಬಾಲ ಗೋಕುಲ ತಂಡಗಳಿಂದ ಕುಣಿತ ಭಜನೆ ಹಾಗೂ ವಿಠ್ಠಲ್ ನಾಯಕ್ ಕಲ್ಲಡ್ಕ ಹಾಗೂ ಶಿವಗಿರಿ ಕಲ್ಲಡ್ಕ ಇವರಿಂದ ಮಕ್ಕಳಿಗೆ ವಿಶೇಷ ಚಟುವಟಿಕೆ, ಮಾತಾಜಿ ಪೋಷಕರಿಗೆ ಪ್ರತ್ಯೇಕ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮವನ್ನು

ವಿಭಾಗ ಸೇವಾ ಪ್ರಮುಖ ಡಾ.ಮನೋಜ್ ಸುಳ್ಯ ಉದ್ಘಾಟಿಸಿದರು.ಕೆ. ಸಮಿತಿ ಅಧ್ಯಕ್ಷ ರಮೇಶ ಉಪಾಧ್ಯಾಯ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಕೋಶಾಧಿಕಾರಿ ಅಜಯ ಕೊಂಬ್ರಬೈಲು, ವಿನಾಯಕ ಬಿಸಿರೋಡು,ಸತೀಶ ಪಲ್ಲಮಜಲು,ಸತೀಶ ಶೆಟ್ಟಿ ಮೊಡಂಕಾಪು,ಹರಿಶ್ಚಂದ್ರ ಫರಂಗಿಪೇಟೆ,ಶುಭಲಕ್ಷ್ಮೀ ಕರ್ಪೆ, ಅಶ್ವಿನಿ ಎಡ್ತೂರು ಮೊದಲಾವರು ಉಪಸ್ಥಿತರಿದ್ದರು.

ಲತಾ ತುಂಬೆ ಸ್ವಾಗತಿಸಿ,ತಪಸ್ವಿನಿ ಪಚ್ಚಿನಡ್ಕ ವಂದಿಸಿದರು.ವರ್ಷ ಮಾತಾಜಿ ನಿರೂಪಿಸಿದರು.

Leave a Comment