ಪುದು ಗ್ರಾ.ಪಂ ದ್ವಿತೀಯ ಅವಧಿಗೆ ಅಧ್ಯಕ್ಷರಾಗಿ ರಮ್ಲಾನ್ ಮಾರಿಪ್ಪಳ್ಳ, ಉಪಾಧ್ಯಕ್ಷರಾಗಿ ರುಕ್ಸಾನ ಅಮೆಮ್ಮಾರ್ ಆಯ್ಕೆ

Coastal Bulletin
ಪುದು ಗ್ರಾ.ಪಂ ದ್ವಿತೀಯ ಅವಧಿಗೆ ಅಧ್ಯಕ್ಷರಾಗಿ ರಮ್ಲಾನ್ ಮಾರಿಪ್ಪಳ್ಳ, ಉಪಾಧ್ಯಕ್ಷರಾಗಿ ರುಕ್ಸಾನ ಅಮೆಮ್ಮಾರ್ ಆಯ್ಕೆ

ಬಂಟ್ವಾಳ :ಪುದು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಪಂಚಾಯತ್ ಸಭಾಭವನದಲ್ಲಿ ಚುನಾವಣೆ ನಡೆಯಿತು.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಎಸ್ಡಿಪಿಐ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ದಿಸಿದ್ದು ಕಾಂಗ್ರೆಸ್ ಬೆಂಬಲಿತರಾಗಿರುವ ರಮ್ಲಾನ್ ಮಾರಿಪ್ಪಳ್ಳ ಅಧ್ಯಕ್ಷರಾಗಿ, ರುಕ್ಸಾನ ಅಮೆಮ್ಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 34 ಸದಸ್ಯ ಸ್ಥಾನದಲ್ಲಿ ಇಬ್ಬರು ಸದಸ್ಯರು ವಿದೇಶಕ್ಕೆ ತೆರಳಿರುವುದರಿಂದ 32 ಸದಸ್ಯರು ಮತದಾನದಲ್ಲಿ ಭಾಗವಹಿಸಿದರು 

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ ಕಾಂಗ್ರೆಸ್ ಬೆಂಬಲಿತ ರಮ್ಲಾನ್ ಮಾರಿಪ್ಲಳ್ಳ ರವರಿಗೆ 19 ಮತ, ಎಸ್ಡಿಪಿಐ ಬೆಂಬಲಿತ ಸದಸ್ಯ ಮೊಹಮ್ಮದ್ ಶಾಫಿರವರಿಗೆ

7 ಮತ, ಬಿಜೆಪಿ ಬೆಂಬಲಿತ ಸುಬ್ರಮಣ್ಯ ರಾವ್ ರವರು 6 ಮತ ಪಡೆದರು 

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ ಕಾಂಗ್ರೆಸ್ ಬೆಂಬಲಿತ ರುಕ್ಸಾನ ಅಮೆಮ್ಮಾರ್ 19 ಮತ, ಎಸ್ಡಿಪಿಐ ಬೆಂಬಲಿತ ಖೈರುನ್ನೀಸ ರವರಿಗೆ 7 ಮತ, ಬಿಜೆಪಿ ಬೆಂಬಲಿತ ವಿದ್ಯಾರವರು 6 ಮತ ಪಡೆದರು. ಬಂಟ್ವಾಳ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್, ಸಹಾಯಕರಾಗಿ ಉಪ ತಹಶೀಲ್ದಾರ್ ನವೀನ್ ಇತರ ಸಿಬ್ಬಂದಿಗಳು ಚುನಾವಣಾಧಿಕಾರಿಯಾಗಿ ಭಾಗವಹಿಸಿದರು

Leave a Comment