ತುಂಬೆ :ಸೆ. 27-30, ಶ್ರೀ ಶಾರದಾ ರಜತ ಮಹೋತ್ಸವ ಸಂಭ್ರಮ ನೂತನ ಶ್ರೀ ಶಾರದಾ ಸಮುದಾಯ ಭವನದ ಲೋಕಾರ್ಪಣೆ.

Coastal Bulletin
ತುಂಬೆ :ಸೆ. 27-30, ಶ್ರೀ ಶಾರದಾ ರಜತ ಮಹೋತ್ಸವ ಸಂಭ್ರಮ ನೂತನ ಶ್ರೀ ಶಾರದಾ ಸಮುದಾಯ ಭವನದ ಲೋಕಾರ್ಪಣೆ.

ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ತುಂಬೆ ಇದರ ಅಶ್ರಯದಲ್ಲಿ ಸುಮಾರು 1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯ ಭವನದ ಲೋಕಾರ್ಪಣಾ ಕಾರ್ಯಕ್ರಮ ಮತ್ತು ಶ್ರೀ ಶಾರದಾ ರಜತ ಸಂಭ್ರಮ ಮಹೋತ್ಸವ ಸಂಭ್ರಮ 2025 ಕಾರ್ಯಕ್ರಮ ಸೆ.27 ರಿಂದ ಸೆ.30 ರ ವರೆಗೆ ಶ್ರೀರಾಮ ನಗರ ರಾಮಲ್ ಕಟ್ಟೆ ತುಂಬೆ ಇಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ತಿಳಿಸಿದರು.

ಅವರು ತುಂಬೆ ಶ್ರೀ ಶಾರದಾ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತುಂಬೆ ಪರಿಸರದಲ್ಲಿ ಯುವಕರ ತಂಡ ಧಾರ್ಮಿಕ ಸೇವಾ ಮತ್ತು ಸಂಘಟನಾತ್ಮಕ ದೃಷ್ಟಿಯಿಂದ ಆರಂಭವಾದ ಸಂಘಟನೆ ಇದೀಗ ರಜತ ವರ್ಷದ ಶಾರದಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ ಎಂದರು.


 ಕಳೆದ 24 ವರ್ಷಗಳ ಹಿಂದೆ ಸುಮಾರು 22 ಸೆಂಟ್ಸ್ ಜಾಗವನ್ನು ಖರೀದಿ ಮಾಡಿ ಸಣ್ಣ ಪ್ರಮಾಣದ ಸಭಾಭವನವನ್ನು ತಳ ಅಂತಸ್ತಿನಲ್ಲಿ ರಚಿಸಿಕೊಂಡಿತ್ತು. ಇದೀಗ ರಜತ ಮಹೋತ್ಸವದ ಸವಿನೆನಪಿಗಾಗಿ ಸುಮಾರು 16000 ಚದರ ಅಡಿಯ ಸುಸಜ್ಜಿತವಾದ ಸಮುದಾಯ ಭವನ ಲೋಕಾರ್ಪಣೆ ಮಾಡಲಿದ್ದೇವೆ.

ಸೆ. 27 ರಂದು ಶನಿವಾರ ಸಂಜೆ 6:30 ರಿಂದ ಪೊಳಲಿ ಶ್ರೀ ಗಿರಿಪ್ರಕಾಶ್ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನ ಸಂಪನ್ನಗೊಂಡು ಸೆ. 28 ರಂದು ಆದಿತ್ಯವಾರ ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ ಡಾ। ಎಮ್. ಎನ್. ರಾಜೇಂದ್ರ ಕುಮಾರ್ ರಿಂದ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ವಹಿಸಲಿದ್ದು, ಯು ಎಸ್ ಎ ಉದ್ಯಮಿ ಕೃಷ್ಣಪ್ರಸಾದ್

ಶೆಟ್ಟಿ ಪೇರ್ಲಬೈಲು ದೀಪ ಪ್ರಜ್ವಲನೆ ಮಾಡಿ, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿರುವುದು. ಸಂಜೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ನಡೆದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೆಂದಗಿಡಿ ತುಳು ನಾಟಕ ನೆರವೇರಲಿರುವುದು.

 ಸೆ.29 ರಂದು ಸೋಮವಾರ ಬೆಳಿಗ್ಗೆ 7.30 ಕ್ಕೆ ಶ್ರೀ ಶಾರದೆಯ ಪ್ರತಿಷ್ಠೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಚಾಲನೆ ನೀಡಲಿದ್ದಾರೆ. ರಜತ ಮಹೋತ್ಸವ ಸಂದರ್ಭದಲ್ಲಿ ಸುಮಾರು 4.25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಜತ ವೀಣೆಯನ್ನು ಸಮರ್ಪಿಸಲಾಗುವುದು, ಸುಮಾರು 25ಸಾವಿರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಮಿತಿಯ ಪ್ರಮುಖರಾದ ರವೀಂದ್ರ ಕಂಬಳಿ, ಜಯಪ್ರಕಾಶ ತುಂಬೆ, ಗಣೇಶ್ ಸುವರ್ಣ ತುಂಬೆ, ರಾಘವ ಬಂಗೇರ ಪೆರ್ಲ ಬೈಲು, ಯೋಗೀಶ್ ಕೋಟ್ಯಾನ್, ಕುಮ್ಡೇಲ್ ದಿವಾಕರ ಪೇರ್ಲಬೈಲು ತುಂಬೆ, ಶೋಭಾಗೋಪಾಲ ಮೈಂದಾನ್ , ನಾರಾಯಣ ಕಿರೋಡಿಯನ್, ಸದಾನಂದ ಕೋಡಿಯಡ್ಕ, ಗೋಪಾಲ ಬೆದ್ರಾಡಿ, ಆರ್.ಎಸ್.ಜಯ, ಉಮಾಲಿಂಗಪ್ಪ ಕುಲಾಲ್, ವಿಜಯ ಕಜೆಕಂಡ, ಜಗನ್ನಾಥ ಸಾಲ್ಯಾನ್ ತುಂಬೆ, ಸಂತೋಷ್ ಕೋಟ್ಯಾನ್ ತುಂಬೆ, ಪ್ರಶಾಂತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Comment