ಬಂಟ್ವಾಳ : ಭಾರತೀಯ ಜನತಾ ಪಾರ್ಟಿ- ಬಂಟ್ವಾಳ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಕಾರ್ಯಕ್ರಮ ದ ಅಂಗವಾಗಿ ಸೆ.26 ರಂದು ಆದಿತ್ಯವಾರ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಬಿಸಿರೋಡು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ದಲ್ಲಿ ಭಜನಾ ಸೇವೆ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಶಾಸಕರು ಭಜನಾ ತಾಳವನ್ನು ತಂಡದ ಮುಖ್ಯಸ್ಥ ರಿಗೆ ಹಸ್ತಾಂತರ ಮಾಡಿದರು. ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೊಳಲಿ ರಾಜರಾಜೇಶ್ವರಿ ಭಜನಾ ತಂಡದ ಜೊತೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಭಜನೆ ಹಾಡಿದರು. ಈ ತಂಡದ ಭಜನೆಯ ನಿಗದಿತ ಸಮಯದವರೆಗೂ ಸುಮಾರು ಒಂದುವರೆ ತಾಸುವರೆಗೆ ಶಾಸಕರು ಭಜನೆಯನ್ನು ಹಾಡಿದರು.
















