Coastal Bulletin

ಬಂಟ್ವಾಳ :ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕುಇದರ ವತಿಯಿಂದ ದಕ್ಷಿಣ ಭಾರತದ ಭೂ ಕೈಲಾಸ ಎಂದು ಹೆಸರುವಾಸಿಯಾದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮ ದೇವಸ್ಥಾನದ ಕೇಳಬಾಗದಲ್ಲಿ ಆದಿತ್ಯವಾರ ನಡೆಯಿತು

ಹಿಂ.ಜಾ.ವೇ.ಬಂಟ್ವಾಳ ತಾಲೂಕಿನ ನೂರಾರು ಕಾರ್ಯಕರ್ತರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಉಪ ಆಹಾರದ ವಿರಾಮದ ವೇಳೆ ಔಪಚಾರಿಕವಾಗಿ ಮಾತನಾಡುವ ವೇಳೆ ದೇವಸ್ಥಾನಕ್ಕೆ ಸಂಬಂಧ ಪಟ್ಟ ಪ್ರಮುಖರಾದ ಮನ್ಮಥ ರಾಜ್ ಜೈನ್ ,ಅಜೀತ್ ಶೆಟ್ಟಿ ಕಾರಿಂಜ ಚಂದ್ರ ಶೇಖರ ಮಾತನಾಡಿ ದೇವಸ್ಥಾನ ಸುತ್ತ ಅಕ್ರಮ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಅಪಾಯ ಇದ್ದು ಹಿಂದು ಜಾಗರಣ ವೇದಿಕೆಯಿಂದ ಹೋರಾಟಕ್ಕೆ ಬೆಂಬಲ

ಬೇಕು ಎಂದು ಚಂದ್ರ ಶೇಖರ್ ಹೇಳಿದರು.

ಈ ಸಂಧರ್ಭದಲ್ಲಿ ಹಿಂ.ಜಾ.ವೇ.ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ಹೋರಾಟಕ್ಕೆ ರೂಪುರೇಷೆ ಸಿದ್ದ ಪಡಿಸಿ ಮುಂದಿನ ದಿನಗಳಲ್ಲಿ ಹಿಂದು ದೇವಸ್ಥಾನದ ಸುರಕ್ಷತೆಗೆ ಹಿಂದು ಜಾಗರಣ ವೇದಿಕೆ ಬದ್ದವಾಗಿದೆ ಎಂದರು.ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ ಪ್ರಮುಖರು ಮತ್ತು ಬಂಟ್ವಾಳ ತಾಲೂಕುಪ್ರಮುಖರುಮತ್ತುತಾಲೂಕಿನಕಾರ್ಯಕರ್ತರು ಪರಿವಾರ ಸಂಘಟನೆಯ ಪ್ರಮುಖರು ಊರ ಪ್ರಮುಖರು ಉಪಸ್ಥಿತರಿದ್ದರು.


Leave a Comment