ಕಾರಿಂಜ: ಯಕ್ಷಾವಾಸ್ಯಮ್ ವಾರ್ಷಿಕೋತ್ಸವ,   ಮೂರ್ಜೆ ವೆಂಕಟೇಶ ಶೆಟ್ಟರಿಗೆ ಪ್ರಶಸ್ತಿ ಪ್ರದಾನ.

Coastal Bulletin
ಕಾರಿಂಜ: ಯಕ್ಷಾವಾಸ್ಯಮ್ ವಾರ್ಷಿಕೋತ್ಸವ,   ಮೂರ್ಜೆ ವೆಂಕಟೇಶ ಶೆಟ್ಟರಿಗೆ ಪ್ರಶಸ್ತಿ ಪ್ರದಾನ.

ಬಂಟ್ವಾಳ:  ಯಕ್ಷಗಾನವು ಸರ್ವಾಂಗೀಣ ಶ್ರೇಷ್ಠ ಕಲೆಯಾಗಿದ್ದು, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಪುರಾಣ ಜ್ಞಾನ ಭಂಡಾರ ಬೆಳೆಯುವುದು. ಯಕ್ಷಗಾನ ತರಬೇತಿ ನೀಡಿ ಮುಂದಿನ ಪೀಳಿಗೆಯ ಕಲಾವಿದರನ್ನು ರೂಪಿಸುವ ಯಕ್ಷವಾಸ್ಯಮ್ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದು  ಮಾಜಿ ಸಚಿವ ಬಿ.ರಮಾನಾಥ  ಅವರು ಹೇಳಿದರು.

ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾ.ಪಂ.ನ ವಗ್ಗ , ಕಾಡಬೆಟ್ಟು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆದ ಯಕ್ಷಾವಾಸ್ಯಮ್ ಕಾರಿಂಜದ  ಷಷ್ಠ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಹರೀಂದ್ರ ಟಿ.ಪೈ ಅವರು ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ  ಶಾಸಕ ರಾಜೇಶ್ ನಾಕ್‌ಉಳಿಪಾಡಿಗುತ್ತು ಅವರು ಶುಭ ಹಾರೈಸಿದರು.  ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ  ಪಿ.ಜಿನರಾಜ ಆರಿಗ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್,  ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರ ಗೌರವಾಧ್ಯಕ್ಷ  ಪ್ರಮೋದ್ ಕುಮಾರ್ ರೈ,ಅಧ್ಯಕ್ಷ ಪ್ರಮೋದ್ ಆಚಾರ್ಯ, ಯಕ್ಷಕೂಟ ಮಧ್ವ ಇದರ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಧ್ವ

, ರಂಗ ಕಲಾವಿದ ರತ್ನದೇವ್ ಪುಂಜಾಲಕಟ್ಟೆ   ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಸಂಸ್ಥೆ ಕೊಡಮಾಡುವ ಯಕ್ಷವಾಸ್ಯಮ್ ಪ್ರಶಸ್ತಿಯನ್ನು ಹಿರಿಯ ಹಿಮ್ಮೇಳ ವಾದಕ ಮೂರ್ಜೆ ವೆಂಕಟೇಶ ಶೆಟ್ಟಿ ಅವರಿಗೆ  ಪ್ರದಾನ ಮಾಡಲಾಯಿತು.  ಯಕ್ಷಗುರು, ಭಾಗವತ ಶ್ರೀನಿವಾಸ ಬಳ್ಳಮಂಜ ಅವರನ್ನು ಸಮ್ಮಾನಿಸಲಾಯಿತು.  ಉತ್ತಮ ಅಂಕ ಗಳಿಸಿದ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಲಾಯಿತು. ವೃತ್ತಿಪರರಾಗಿ ಯಕ್ಷಗಾನ ಮೇಳಕ್ಕೆ ಸೇರಿದ ಸಂಸ್ಥೆಯ ಕಲಾವಿದರನ್ನು ಗೌರವಿಸಲಾಯಿತು.  

ಜಯರಾಮ ಭಟ್ ಅವರು ಸ್ವಾಗತಿಸಿದರು.  ಸಂಚಾಲಕಿ ಸಾಯಿಸುಮಾ ಎಂ.ನಾವಡ ಕಾರಿಂಜ  ವಂದಿಸಿದರು. ದೇವದಾಸ ಶೆಟ್ಟಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ   ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಾರಿಂಜದ ಅರ್ಚಕ ಮಿಥುನ್ ರಾಜ್ ನಾವಡ   ಅವರು  ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ,   ಭಾಗವತಿಕೆ,  ಸಂಸ್ಥೆಯ ಕಲಾವಿದರಿಂದ ಯಕ್ಷಗಾನ ಶ್ರೀ ಮಹಾದೇವೀ ಲಲಿತೋಪಖ್ಯಾನ ಪ್ರದರ್ಶನ ನಡೆಯಿತು.

Leave a Comment