ಬಂಟ್ವಾಳ : ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ.

Coastal Bulletin
ಬಂಟ್ವಾಳ : ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ.

ಬಂಟ್ವಾಳ ತಾಲೂಕು ಕುಲಾಲ ಸಮುದಾಯ ಭವನ ಪೊಸಳ್ಳಿ ಯಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವವನ್ನು ನಿವೃತ್ತ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಂಜಪ್ಪ ಮೂಲ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡುತ್ತಾ ಕೆಲಸದ ಜಂಜಾಟದಲ್ಲಿದ್ದ ನಿವೃತ್ತರಿಗೆ ಸಮಾಜ ಸೇವೆ ಮಾಡಲು ಇದೊಂದು ಒಳ್ಳೆಯ ಸಂದರ್ಭ ಮಾತ್ರವಲ್ಲ ಹಿರಿಯ ರ ಸಮಸ್ಯೆಗಳಿಗೆ ಪರಿಹಾರ ದೊಂದಿಗೆ ಯುವಕರಿಗೆ ಮಾರ್ಗದರ್ಶನ ಮಾಡಲು ಸಮಾಜ ದಲ್ಲಿ ಇಂತಹ ಸಂಘಟನೆಗಳು ಬೇಕು ಎಂದು ಸಂಘಕ್ಕೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಟಿ ಶೇಷಪ್ಪ ಮಾಸ್ಟರ್ ಮಾತನಾಡಿ ನಾವು ವೃದ್ಧರು ಎಂಬ ಹಿಂಜರಿಕೆ ಬಿಟ್ಟು ನಾವು ಹಿರಿಯರು ಎಂಬ ವಿಶಾಲ ಮನಸ್ಸಿನಿಂದ ಮನೆಯಿಂದ ಹಿಡಿದು ಎಲ್ಲಾ ವಯೋಮಾನದವರೊಂದಿಗೆ ಹಂಚಿಕೊಂಡು ಕಾರ್ಯನಿರ್ವಹಿಸಿದಾಗ ಇನ್ನಷ್ಟು ಮಾನಸಿಕ ನೆಮ್ಮದಿ ದೊರೆತು ಅರೋಗ್ಯಪೂರ್ಣವಾಗಿ ಬದುಕಲು ಸಹಾಯವಾಗುವುದು. ಅದಕ್ಕಾಗಿ ಸಂಘವನ್ನು ಬಲಪಡಿಸುವುದರೊಂದಿಗೆ ಸ್ವಂತ ನಿವೇಶನ ಸಭಾಭವನದ ಕನಸು ನಿಮ್ಮೆಲ್ಲರ ಸಹಕಾರದಿಂದ ಆಗಬೇಕಾಗಿದೆ ಎಂದು ತಿಳಿಸಿದರು.

 ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕುಲಾಲ /ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ )ಇದರ ರಾಜ್ಯಾಧ್ಯಕ್ಷರಾದ ಗಂಗಾಧರ್ ಬಂಜನ್ ಕುಳಾಯಿ ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಕುಲಾಲ ಸುಧಾರಕ ಸಂಘ ಬಂಟ್ವಾಳ ಇದರ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶೀನ ಮೂಲ್ಯ ಅಲ್ಲಿಪ್ಪಾದೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಘಾಟನೆ ಮಾಡಿದ

ಮಂಜಪ್ಪ ಮೂಲ್ಯ ಹಾಗೂ 75 ವರ್ಷ ದಾಟಿದ ಹಿರಿಯರಾದ ಸೀತಾರಾಮ ಗೋಳಿನೆಲ, ಜಾರಪ್ಪ ಮೂಲ್ಯ ಬಂಡಾರಿಬೆಟ್ಟು ರವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರಿಚಯವನ್ನು ಸದಸ್ಯರಾದ ವಿಶ್ವನಾಥ ಸಾಲಿಯಾನ್,ಶ್ರೀಮತಿ ರತ್ನಾವತಿ, ಶ್ರೀಮತಿ ರೋಹಿಣಿ ಮಾಡಿದರು.ಶ್ರೀಮತಿ ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು.ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಜತೆ ಕಾರ್ಯದರ್ಶಿ ಲಕ್ಷ್ಮಣ ಮೂಲ್ಯ ವರದಿ ವರ್ಷದಲ್ಲಿ ನಿಧನರಾದ ಸದಸ್ಯರು ಶ್ರೀ ಪೂವಪ್ಪ ಮೂಲ್ಯ ಗಾಂದೊಡಿ, ಡೊಂಬಯ್ಯ ಮೂಲ್ಯ ಭಂಡಾರಿಬೆಟ್ಟು, ದಯಾನಂದ ಬೆಳ್ಳೂರ್ ಇವರ ಮಾಹಿತಿ ನೀಡಿದರು. ಸಭೆಯು ದಿವಂಗತರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು ಕಾರ್ಯದರ್ಶಿ ಪದ್ಮನಾಭ ಎಂ ವರದಿ ಮಂಡಿಸಿ ಕುಮ್ಕಿ ಜಮೀನು ಸ್ವಾಧೀನ ಮತ್ತು ಕಾನೂನು ಮಾಹಿತಿ ನೀಡಿದರು.

ಕೋಶಾಧಿಕಾರಿ ಸೋಮಯ್ಯ ಮೂಲ್ಯ ಹನೈನಡೆ ಸಂಘದ ಲೆಕ್ಕಪತ್ರ ಮಂಡಿಸಿ ಹಿರಿಯರಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಹಾಗೂ ತೀರ್ಥಯಾತ್ರೆ ಬಗ್ಗೆ ಮಾಹಿತಿ ನೀಡಿದರು.ಉಪಾಧ್ಯಕ್ಷರಾದ ಸೋಮಪ್ಪ ಮೂಲ್ಯ ವಂದಿಸಿದರು.ಶ್ರೀಮತಿ ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕಾರಿ ಸಮಿತಿ ಸದಸ್ಯರಾದ ಓಬಯ್ಯ ಮೂಲ್ಯ, ನೀಲಪ್ಪ ಸಾಲಿಯಾನ್, ವಿಠ್ಠಲ್ ಮೂಲ್ಯ ಜಕ್ರಿಬೆಟ್ಟು ಕೃಷ್ಣಶ್ಯಾಮ್ ಹಾಗೂ ಕುಲಾಲ ಯುವವೇದಿಕೆಯ ಯುವಕರು ನಿತೀಶ್ ಪಲ್ಲಿಕಂಡ ನೇತೃತ್ವ ದಲ್ಲಿ ವ್ಯವಸ್ಥೆಯಲ್ಲಿ ಸಹಕರಿಸಿದ್ದರು

Leave a Comment