ತುಂಬೆ: ಕುಲಾಲ ಸೇವಾ ಸಂಘದ ಆಶ್ರಯದಲ್ಲಿ 9ನೇ ವರ್ಷದ ಆಟಿದ ನೆನಪು ಮತ್ತು ವಾರ್ಷಿಕ ಮಹಾಸಭೆ.

Coastal Bulletin
ತುಂಬೆ: ಕುಲಾಲ ಸೇವಾ ಸಂಘದ ಆಶ್ರಯದಲ್ಲಿ 9ನೇ ವರ್ಷದ ಆಟಿದ ನೆನಪು ಮತ್ತು ವಾರ್ಷಿಕ ಮಹಾಸಭೆ.

ಬಂಟ್ವಾಳ :ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ಆಶ್ರಯದಲ್ಲಿ 9ನೇ ವರ್ಷದ ಆಟಿದ ನೆನಪು ಮತ್ತು ವಾರ್ಷಿಕ ಮಹಾಸಭೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರುವಾಯನಕೆರೆ ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾದ ಸೋಮಯ್ಯ ಮೂಲ್ಯ ಹನೈನಡೆ ಜ್ಯೋತಿ ಬೆಳಗಿಸಿ ತೆಂಗಿನ ಸಿಂಗಾರ ಅರಳಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬಡವರಿಗೆ ಆರ್ಥಿಕ ಸಹಾಯ ಅಲ್ಲದೆ ಶ್ರಮದಾನ, ಭಜನಾ ಕಾರ್ಯಕ್ರಮ ತುಳುನಾಡ ಸಂಸ್ಕೃತಿ ಉಳಿಸುವ ಅಟಿಯ ನೆನಪು ಮೊದಲಾದ ಸಮಾಜ ಮುಖಿ ಚಟುವಟಿಕೆಗಳಿಂದ ಕುಲಾಲ ಸಂಘವು ಉಳಿದ ಸಂಘಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟು ಶುಭ ಹಾರೈಸಿದರು.

ಸಂಘದ ಅಧ್ಯಕ್ಷರಾದ ಶಿವಕುಮಾರ ದಂಪತಿಗಳು ದೀಪ ಬೆಳಗಿಸಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು ನಂತರ ವಾರ್ಷಿಕ ಕ್ರೀಡಾಕೂಟ ನಡೆಯಿತು ಮಧ್ಯಾಹ್ನದ ಭೋಜನದ ವ್ಯವಸ್ಥೆಯಲ್ಲಿ ಸಂಘದ ಸದಸ್ಯರು ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಎಲ್ಲರೂ ಸವಿದರು.

ಆಟಿದ ನೆನಪು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ,ರೇಷ್ಮಾ ವಿನಯ್ ಉಪನ್ಯಾಸಕರು ಪದುವಾ ಕಾಲೇಜು ಮಂಗಳೂರು ಮಾತನಾಡಿ, ಅಟಿಯ ನೆನಪು ಮಾಡಿರುವುದರಿಂದ ಎಲ್ಲರೂ ಹಿಂದಿನ ಬಡತನದ ಕಾಲದ ಆಟಿ ಹೇಗಿತ್ತು ಈಗ ಹೇಗೆ ವಿಜೃಂಭಣೆ ಆಗುತ್ತಿದೆ ಇದು ನಮ್ಮ ಮಕ್ಕಳಿಗೆ ತಿಳಿಯಪಡಿಸಿರುವುದು ಅವುಚಿತ್ಯಪೂರ್ಣವಾಗಿದೆ

ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮನೋಜ್ ಕುಲಾಲ್ ಸಿದ್ದಕಟ್ಟೆ,ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಮಹಿಳಾ ಘಟಕದ ಅಧ್ಯಕ್ಷರಾದ ಲತಾ ಗೋಪಾಲ್, ಗೋಪಾಲ್ ಗೋವಿಂತೋಟ ಭಾಗವಹಿಸದ್ದರು.

ಪ್ರಾರ್ಥನೆಯನ್ನು ಶೋಭಾ ಸದಾನಂದ್ ಮಾಡಿದರು. ಸಂದೀಪ್ ಕುಲಾಲ್ ಮುದಲ್ಮೆ ಸ್ವಾಗತಿಸಿದರು. ವರದಿಯನ್ನು ಸದಾನಂದ ಕುಲಾಲ್ ಮಂಡಿಸಿದರು. ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ವಿಜೇತರ ಪಟ್ಟಿಯನ್ನು ಭಾಸ್ಕರ್ ಕುಲಾಲ್ ಓದಿ, ವಂದಿಸಿದರು ಮನರಂಜನಾ ಕಾರ್ಯಕ್ರಮದಲ್ಲಿ ಭಾರತಿ ಐತಪ್ಪ ಕುಲಾಲ್ ಹಾಗೂ ಮಾಲತಿ ದಿನೇಶ್ ರವರ ಆಟಿಕಳಂಜೆ ಹಾಗೂ ಕು ಶ್ರಾವಣಿಯವರು ನೃತ್ಯ ಪ್ರದರ್ಶಿಸಿದರು. ಭಾರತಿ ಶೇಷಪ್ಪ ನಿರೂಪಿಸಿದರು.

ಆಟೋಟಗಳನ್ನು ಭಾರತಿ ಶೇಷಪ್ಪ, ಪ್ರಿಯಾ ಸತೀಶ್,ಶೋಭಾ ಭಾಸ್ಕರ್, ಶೋಭಾ ಸದಾನಂದ್, ಕು.ನಿಧಿಷ,ಕೀರ್ತೆಶ್ ನಡೆಸಿಕೊಟ್ಟರು. ಐತಪ್ಪ ಕುಲಾಲ್, ನೀಲಪ್ಪ ಸಾಲಿಯಾನ್,ಹರೀಶ್ ಪೆರ್ಲ ಬೈಲ್, ದಿನೇಶ್ ಪೆರ್ಲಬೈಲ್ ಗೋಪಾಲ್ ಬೆದ್ರಾಡಿ, ಪ್ರವೀಣ್ ಕುಲಾಲ್ ಸಹಕರಿಸಿದರು.

Leave a Comment