ಬಂಟ್ವಾಳ :ಸ್ವಾಮಿ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರವಾದ ಡಿವೈನ್ ಪಾರ್ಕ್ ಸಾಲಿಗ್ರಾಮ, ಇದರ ವತಿಯಿಂದ ಯೋಗ ಪರ್ಯಟನ ಕಾರ್ಯಕ್ರಮವು ಅ 20 ರಂದು ಭಾನುವಾರದಂದು ಬಂಟವಾಳದ ಲಯನ್ಸ್ ಸಭಾಭವನದಲ್ಲಿ ಸಂಸ್ಥೆಯ ಅಂಗ ಸಂಸ್ಥೆಗಳಾದ ಬಂಟ್ವಾಳ, ಮೂಡಬಿದ್ರೆ ಹಾಗೂ ಬೆಳ್ತಂಗಡಿ ವಿವೇಕ ಜಾಗ್ರತ ಬಳಗಗಳ ಸಂಯುಕ್ತ ಆಶ್ರಯದಲ್ಲಿ ಯಶಸ್ವಿಯಾಗಿ ನೆರವೇರಿತು.
ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಇದರ ಮುಖ್ಯಸ್ಥರು ಹಾಗೂ ಪ್ರಧಾನ ವೈದ್ಯರಾದ ಡಾಕ್ಟರ್ .ಎ.ವಿವೇಕ ಉಡುಪ ,B.N.Y.S ,M.D , ( ಯೋಗೀಜೀ) ಇವರು ಮಂಗಳಾರತಿ ಬೆಳಗಿ , ಶ್ರೀ ರಾಮರಕ್ಷಾ ಸ್ತೋತ್ರ ಪಠಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೈಕಾರದೊಂದಿಗೆ ಕಾರ್ಯಕ್ರಮ
ಮುಕ್ತಾಯಗೊಂಡಿತು ಕಾರ್ಯಕ್ರಮದ ನಂತರ ಪಾಲ್ಗೊಂಡ 8ನೂರಕ್ಕೂ ಹೆಚ್ಚು ಜನರಿಗೆ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪ್ರದೀಪ ಮೂಡಬಿದ್ರೆ ಸ್ವಾಗತಿಸಿದರು ಉಷಾ ಕಿರಣ್ ಶೆಟ್ಟಿ ಮೂಡಬಿದ್ರೆ ಸರ್ವಕ್ಷೇಮ ಆಸ್ಪತ್ರೆಯ ವೈಶಿಷ್ಟ್ಯತೆಗಳ ಬಗ್ಗೆ ತಿಳಿಸಿದರು. ಮಧುಸೂದನ್ ಶಂಭೂರ್ ಪ್ರಸ್ತಾವನೆಗೈದರು. ಶಿವರಾಜ್ ಅಂತರ ವಂದನಾರ್ಪಣೆ ಗೈದು ಗಿರೀಶ ಹೆಗಡೆ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು .
















