ಬಂಟ್ವಾಳ :ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ 14 ಕೋಟಿ ವೆಚ್ಚದಲ್ಲಿ ನಿಮಾ೯ಣಗೊಂಡ ಗೊಳ್ತಮಜಲು-ಮಂಚಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ 75ನೇ ಸ್ವಾತಂತ್ರ್ಯೊತ್ಸವ ಪ್ರಯುಕ್ತ ಸಾಲುಮರ ಬೆಳೆಸುವ ಅಭಿಯಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಗಿಡ ನೆಡುವ ಮೂಲಕ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಪ್ರಾಕೃತಿಕವಾಗಿ ಸಿಗುವ ಆಮ್ಲಜನಕಕ್ಕಾಗಿ ಹೆಚ್ಚು ಹೆಚ್ಚು ಗಿಡ ನೆಡುವ ಅವಶ್ಯಕತೆ ಇದೆ ಎಂದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಗೋಳ್ತಮಜಲು
ಗ್ರಾ.ಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ವೀರಕಂಭ ಸದಸ್ಯ ದಿನೇಶ್ ಪೂಜಾರಿ, ಎಂಜಿನಿಯರ್ ಪ್ರಸನ್ನ, ಗುತ್ತಿಗೆದಾರ ಪ್ರೇಮನಾಥ, ಪ್ರಮುಖರಾದ
ರವಿ ಕುಮಾರ್, ಗಣೇಎಶ ರೈ ಮಾಣಿ ಇದ್ದರು.















