ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ಗೋಮಾಯಿ ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನದ 39ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಪೊಳಲಿ ಶ್ರೀ ಗಿರಿಪ್ರಕಾಶ್ ತಂತ್ರಿಯವರ ಪೌರೋಹಿತ್ಯದಲ್ಲಿ ಮಾ.01ನೇ ಆದಿತ್ಯವಾರ ಸಂಭ್ರಮದಿಂದ ಶ್ರೀ ಕ್ಷೇತ್ರದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ 8.30ಕ್ಕೆ ಪ್ರಾರ್ಥನೆ, ಗಣಹೋಮ ಬಳಿಕ ಪಂಚಾಮೃತ ತಂಬಿಲಾರಾಧನೆ, ಮಧ್ಯಾಹ್ನ 12.15ಕ್ಕೆ ಶ್ರೀ ಸತ್ಯನಾರಾಯಣ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6.00ರಿಂದ ಸ್ಥಳೀಯ ಅರಳು ಪ್ರತಿಭೆಗಳಿಂದ ನೃತ್ಯ ವೈವಿದ್ಯ ಬಳಿಕ 8ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ
ನಡೆಯಲಿದ್ದು ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಇವರು ಆಶೀರ್ವಾಚನ ನೀಡಳಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು. ಬಳಿಕ ಶ್ರೀ ಸಾಯಿ ಶಕ್ತಿ ಕಲಾ ಬಳಗ ಮಂಗಳೂರು ಇವರಿಂದ "ಜೋಡು ಜೀಟಿಗೆ" ಎಂಬ ತುಳು ಜಾನಪದ ಸಿನಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.













