ಬಂಟ್ವಾಳ :ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ.ವಿದ್ಯಾರ್ಥಿವೇತನ ವಿತರಣೆ,ಇ-ಕಲೆಕ್ಷನ್ ಸೌಲಭ್ಯ ಬಿಡುಗಡೆ, ಸಹಕಾರಿ ಶಿಕ್ಷಣ ನಿಧಿ ಹಸ್ತಾಂತರ.

Coastal Bulletin
ಬಂಟ್ವಾಳ :ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ.ವಿದ್ಯಾರ್ಥಿವೇತನ ವಿತರಣೆ,ಇ-ಕಲೆಕ್ಷನ್ ಸೌಲಭ್ಯ ಬಿಡುಗಡೆ, ಸಹಕಾರಿ ಶಿಕ್ಷಣ ನಿಧಿ ಹಸ್ತಾಂತರ.

ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾದ ಸಮಾಜ ಸೇವಾ ರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ಜನ್ಮದಿನದ ಪ್ರಯುಕ್ತ ಭಾನುವಾರ ಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಸಮಾಜ ಸೇವಾ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಮಾಜ ಸಹಕಾರಿ ಭವನದ ಡಾ। ಬಾಳಪ್ಪ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು.

ಸ್ಥಾಪಕರ ದಿನಾಚರಣೆಯ ಪ್ರಯುಕ್ತ ಉನ್ನತ ಶಿಕ್ಷಣ ಪಡೆಯುತ್ತಿರುವ ಸಂಘದ 204 ಸದಸ್ಯರ ಮಕ್ಕಳಿಗೆ ಸಂಘದ ವಿದ್ಯಾನಿಧಿಯಿಂದ ಒಟ್ಟು ರೂ.8,80,000 ವಿದ್ಯಾರ್ಥಿವೇತನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಸಂಘದ ಐ.ಎಫ್.ಎಸ್.ಸಿ ಕೋಡ್ ಮತ್ತು ಸಂಘದ ಸದಸ್ಯರ ಖಾತೆಗೆ ಯುಪಿಐ, ಐಎಂಪಿ ಮತ್ತು ನೆಫ್ಟ್ ಮೂಲಕ ನೇರವಾಗಿ ಜಮೆ ಮಾಡುವ ಇ-ಕಲೆಕ್ಷನ್ ಸೌಲಭ್ಯವನ್ನು ಬಿಡುಗಡೆ ಮಾಡಲಾಯಿತು. ಈ ಮೂಲಕ ಬಂಟ್ವಾಳ ತಾಲೂಕಿನಲ್ಲಿ ಐ.ಎಫ್.ಎಸ್.ಸಿ ಕೋಡ್  ಹೊಂದಿರುವ ಮೊದಲ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐ.ಸಿ.ಐ.ಸಿ.ಐ. ಬ್ಯಾಂಕ್ ರೀಜನಲ್ ಹೆಡ್ ಪ್ರಶಾಂತ್ ಕಿಣಿ, ಸಂತೋಷ್, ಐ.ಸಿ.ಐ.ಸಿ.ಐ. ಬ್ಯಾಂಕ್ ಬಿ.ಸಿ.ರೋಡ್ ಶಾಖಾ ವ್ಯವಸ್ಥಾಪಕ ರವಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್‌.ವಿ. ಹಿರೇಮರ್ ಮತ್ತು ಅಮ್ಮೆಂಬಳ ಬಾಳಪ್ಪರವರ ಸೋದರ ಸಂಬಂಧಿ ರವೀಂದ್ರನಾಥ್ ಭಾಗವಹಿಸಿದ್ದರು. ಇ-ಕಲೆಕ್ಷನ್ ಸೌಲಭ್ಯದ ಬಗ್ಗೆ

ಐ.ಸಿ.ಐ.ಸಿ.ಐ. ಬ್ಯಾಂಕ್‌ನ ಅಧಿಕಾರಿಗಳು ಉಪಯುಕ್ತ ಮಾಹಿತಿ ನೀಡಿದರು.

ಸಂಘದ 2024-25ನೇ ಸಾಲಿನ ಲಾಭಾಂಶದಿಂದ ಕೊಡಲ್ಪಡುವ ಸಹಕಾರಿ ಶಿಕ್ಷಣ ನಿಧಿಯ ಚೆಕ್ ರೂ. 7,56,853 ಅನ್ನು ಸಹಕಾರಿ ಯೂನಿಯನ್ ಸಿಇಓ ಎಸ್.ವಿ.ಹಿರೇಮರ್ ಅವರಿಗೆ ಸಂಘದ ಅಧ್ಯಕ್ಷರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಜನಾರ್ಧನ ಬೊಂಡಾಲ, ನಿರ್ದೇಶಕರಾದ ಬಿ.ರಮೇಶ್ ಸಾಲ್ಯಾನ್, ರಮೇಶ್ ಸಾಲ್ಯಾನ್ ಸಂಚಯಗಿರಿ, ಸುರೇಶ್ ಕುಲಾಲ್ ಎನ್., ಭೋಜ ಸಾಲ್ಯಾನ್, ಪ್ರೇಮನಾಥ ಬಂಟ್ವಾಳ್, ವಿದ್ಯಾ, ಮಾಲತಿ ಮಚೇಂದ್ರ, ರೇಖಾ ನಾಯಕ್, ಎಂ.ಕೆ ಗಣೇಶ್‌ ಸಮಗಾರ ಮತ್ತು ಜಗನ್ನಿವಾಸ ಗೌಡ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಅರುಣ್ ಕುಮಾ‌ರ್ ದಿಕ್ಕೂಚಿ ಭಾಷಣ ಮಾಡಿದರು, ದೀಪಿಕಾ ಪ್ರಾರ್ಥನೆಗೈದರು, ಸಂಘದ ನಿರ್ದೇಶಕರಾದ ಸತೀಶ್ ಪಲ್ಲಮಜಲು ಸ್ವಾಗತಿಸಿದರು, ಸಂಘದ ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯ ಪ್ರಸ್ತಾವಿಸಿದರು, ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಮ್.ಕೆ. ಕಾರ್ಯಕ್ರಮ ನಿರ್ವಹಿಸಿದರು, ಸಂಘದ ಉಪ್ಪಿನಂಗಡಿ ಶಾಖೆಯ ಪ್ರಭಾರ ವ್ಯವಸ್ಥಾಪಕರಾದ ಶಿವರಾಮ ಧನ್ಯವಾದ ಸಮರ್ಪಿಸಿದರು.






Leave a Comment