ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಕಳೆದ 25 ವರುಷಗಳಿಂದ ಓಂ ಫ್ರೆಂಡ್ಸ್ ಕ್ಲಬ್ (ರಿ.)ಎಂಬ ಸೇವಾ ಸಂಸ್ಥೆಯು ಸಾಮಾಜಿಕ, ಧಾರ್ಮಿಕ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಗಳನ್ನು ಮಾಡುತ್ತಾ 1999ರಲ್ಲಿ ಕೀರ್ತಿಶೇಷ ಶ್ರೀ ಸೇಸಪ್ಪ ಕೋಟ್ಯಾನ್ ರವರ ಮಾರ್ಗದರ್ಶನದಲ್ಲಿ, ಶ್ರೀ ದೇವದಾಸ್ ರೈ ಪಚ್ಚಿನಡ್ಕ ಇವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಂಘಕ್ಕೆ ಇದೀಗ 25 ವರ್ಷದ ರಜತ ಸಂಭ್ರಮ .
ರಜತ ಸಂಭ್ರಮದ ಅಂಗವಾಗಿ ವರ್ಷವಿಡೀ ಬೇರೆ ಬೇರೆ ಕ್ಷೇತ್ರಗಳಲ್ಲಿ 25 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ "ರಜತ ಸಂಭ್ರಮ"ವು ಫೆ.25 ರಂದು
ಆದಿತ್ಯವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪಚ್ಚಿನಡ್ಕದ ಕ್ಲಬಿನ ಅವರಣದಲ್ಲಿ ನಡೆಯಲಿದೆ ಎಂದು ಕ್ಲಬ್ ನ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









