ಬಂಟ್ವಾಳ : ದುಬೈಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಕೋಟೆಕಾರು బిరి ಕೆಂಪುಮಣ್ಣು ನಿವಾಸಿ ವಿದಿಶಾ ಕುಲಾಲ್ (28) ಮೃತಪಟ್ಟಿದ್ದಾರೆ
ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣುರ್ ನ ಅವರ ಏಕೈಕ ಪುತ್ರಿಯಾಗಿರುವ ವಿದಿಶಾ ದುಬೈ ಏರ್ಪೋಟ್ ನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪೆನಿಯಲ್ಲಿ 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಗುರುವಾರ ಕಂಪನಿಯ ಕ್ಯಾಬ್ ಬರದ ಹಿನ್ನಲೆಯಲ್ಲಿ ತಾನು ಆರು ತಿಂಗಳ ಹಿಂದೆ ಖರೀದಿಸಿದ್ದ ಹೊಸ ಕಾರಿನಲ್ಲಿ ಸಂಚರಿಸುತ್ತಿದ್ದಾಗ ವಿಮಾನ ನಿಲ್ದಾಣದ ಸನಿಹದಲ್ಲೇ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಮತ್ತು ಕಂಬವೊಂದಕ್ಕೆ ಢಿಕ್ಕಿ ಹೊಡೆಯಿತು. ಗಂಭೀರ ಸ್ಥಿತಿಯಲ್ಲಿದ್ದ ವಿದಿಶಾ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟರು.
ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ
ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಬಳಿಕ ಫೈನಾನ್ಸ್ ಮ್ಯಾನೇಜ್ಮೆಂಟ್ ಕೋರ್ಸು ಪೂರೈಸಿ ಬೆಂಗಳೂರಿನ ಟೆಸ್ಕೋ ಕಂಪನಿಯಲ್ಲಿ ಎರಡು ವರುಷ ಸೇವೆ ಸಲ್ಲಿಸಿದ್ದರು. 2019ರಿಂದ ದುಬೈ ಏರ್ಪೋಟ್ ಜೆಟ್ ಏವಿಯೇಶನ್ನ ಎಕ್ ಪೆಡಿಟರ್ನಲ್ಲಿ ಉದ್ಯೋಗದಲ್ಲಿದ್ದರು. ಪ್ರತಿಭಾನ್ವಿತೆಯಾಗಿದ್ದ ವಿದಿಶಾ ವಿದ್ಯಾರ್ಥಿ ದೆಸೆಯಲ್ಲೇ ದೇರಳಕಟ್ಟೆ ರೋಟರ್ಯಾಕ್ಟ್ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ, ಸ್ಥಳೀಯ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ವಿದಿಶಾ ದುಬ್ಬಾಯಲ್ಲಿ ಡೈವಿಂಗ್ ಲೈಸನ್ಸ್ ಪಡೆದು ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದರು. ಹೆತ್ತವರನ್ನು ದುಬ್ಬಾಗೆ ಕರೆಸಿಕೊಂಡು ಹೊಸ ಕಾರಿನಲ್ಲಿ ಸುತ್ತಾಡಿಸಿದ್ದರು. ತಂದೆ ತಾಯಿ ಮಗಳ ಮದುವೆಗೆ ತಯಾರಿ ನಡೆಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ.










