Coastal Bulletin

ಬಂಟ್ವಾಳ :ತಾಲೂಕಿನ ಭಂಡಾರಿಬೆಟ್ಟು ಎಂಬಲ್ಲಿ ಬಿರುವೆರ್ ಕುಡ್ಲ ಸಂಘಟನೆ ವತಿಯಿಂದ ಬುಧವಾರ ನಡೆದ ನೂತನ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.

ಕಷ್ಟದಲ್ಲಿರುವ ಕುಟುಂಬಗಳ ಕಣ್ಣೀರು ಒರೆಸುವ ಮೂಲಕ ಭಗವಂತನ ಸಾಮೀಪ್ಯ ಸಾಧ್ಯವಾಗುತ್ತದೆ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಬಿರುವೆರ್ ಕುಡ್ಲ ಸಂಘಟನೆ ಸ್ಪಂದಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ಕುಮಾರ್ ಕಟೀಲು ಹೇಳಿದ್ದಾರೆ. ಇಲ್ಲಿನ ಭಂಡಾರಿಬೆಟ್ಟು ಎಂಬಲ್ಲಿ ಬಿರುವೆರ್ ಕುಡ್ಲ ಸಂಘಟನೆ ವತಿಯಿಂದ ಬಡ ಕುಟುಂಬದ ಲಿಂಗಪ್ಪ ಮತ್ತು ಮೋಹಿನಿ ದಂಪತಿಗೆ ಬುಧವಾರ ನೂತನ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ

ನೀಡಿ ಅವರು ಮಾತನಾಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶುಭ ಹಾರೈಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಳ್ ಬಾಗ್, ಬಿಜೆಪಿ ಮುಂದಾಳು ವಸಂತ ಪೂಜಾರಿ, ವಕೀಲ ಪ್ರಸಾದ್ ಕುಮಾರ್ ರೈ, ಚಂದ್ರಶೇಖರ್, ವೆಂಕಟೇಶ್, ಲಕ್ಷ್ಮಣ, ಲಕ್ಷ್ಮೀಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. 

Leave a Comment