ಬಂಟ್ವಾಳ :ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಜಾನಪದ ರೈತ ಕ್ರೀಡೆಯಾದ ಕಂಬಳ ತನ್ನ ಕಂಪನ್ನು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಿನಾಂಕ 19-04-2025 ಶನಿವಾರ ಮತ್ತು 20-04-2025ರ ಭಾನುವಾರದಂದು ಶಿವಮೊಗ್ಗದ ಮಾಚೇನಹಳ್ಳಿ, ಯಲ್ಲಿ ಕಂಪಿಸಲಿದೆ.
ಕರಾವಳಿ ಕರ್ನಾಟಕ ಜಾನಪದ ಕ್ರೀಡೆಯನ್ನು ವಿಶ್ವ ಪರಂಪರಿಕ ತಾಣವಾದ ಶಿವಮೊಗ್ಗದಲ್ಲಿ ನಡೆಸಲು ಶ್ರೀಮತಿ ಕಲ್ಪನ ಸಂತೋಷ, ಕೆ. ಎಸ್. ನಾಗಪಾತ್ರಿಗಳು, ಶ್ರೀ ನಾಗಯಕ್ಷೆ ದೇವಸ್ಥಾನ, ಹೆಗಲತ್ತಿ, ತೀರ್ಥಹಳ್ಳಿ (ತಾ) ಇವರು ಚಿಂತಿಸಿದ್ದು, ಇಂತಹ ಜನಪ್ರಿಯ ಜಾತ್ಯಾತೀತ ರೈತ ಕ್ರೀಡೆಯನ್ನು ಜೋಗದ ಸಿರಿಯಲ್ಲಿ ಮೊಳಗಿ ಕೊಡಚಾದ್ರಿ ಶಿಖರದಿ ಹೊಮ್ಮಲು ಶಿವಮೊಗ್ಗ ನಗರದ ಅಭಿವೃದ್ಧಿ ಯೋಜನೆಯ ರುವಾರಿ 7 ಬಾರಿ ಶಾಸಕರಾಗಿ, ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಹಲವು ಇಲಾಖೆಯ ಸಚಿವರಾಗಿ, ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಮತ್ತು ಸಾಂಸ್ಕೃತಿಕ ರಾಯಭಾರಿಯು ಹಾಗೂ ನಂದನ ಮತ್ತು ಫೇಸ್ ವಿದ್ಯಾಸಂಸ್ಥೆಯ ಅಧ್ಯಕ್ಷರು ಆಗಿರುವ ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ “ಮಲೆನಾಡ ಕಂಬಳ" ವನ್ನು ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಸಹಬಾಗಿತ್ವದಲ್ಲಿ ಹಚ್ಚ ಹಸಿರ ಪಶ್ಚಿಮ ಘಟ್ಟಗಳ ದ್ವಾರ ಶಿವಮೊಗ್ಗ ತುಂಗೆಯ ತಟದಲ್ಲಿ "ಮಲೆನಾಡ ಕಂಬಳ"ವನ್ನು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಹಾಗೂ ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿಯನ್ನು ರಚಿಸಿ ಇದರ ಸಹಯೋಗದೊಂದಿಗೆ
ಜನಪ್ರತಿನಿಧಿಗಳನ್ನು, ಸರ್ವಧರ್ಮಿಯರನ್ನು ಹಾಗೂ ಎಲ್ಲ ಕಂಬಳ ಅಭಿಮಾನಿಯನ್ನು ಒಗ್ಗೂಡಿಸಿ "ಮಲೆನಾಡ ತುಂಗ-ಭದ್ರ ಜೋಡುಕರೆ ಕಂಬಳ"ವನ್ನು ಆಯೋಜಿಸಲು ತೀರ್ಮಾನಿಸಿರುತ್ತೇವೆ.
ರೋಟರಿ ಡಿಸ್ಟ್ರಿಕ್ಟ್ 3181 ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮ್ ದತ್ತರವರು ಈಗಾಗಲೇ ಕಾರ್ಯಕ್ರಮದ ಯಶಸ್ಸಿಗೆ ಶುಭವನ್ನ ಹಾರೈಸಿರುತ್ತಾರೆ,
ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಜನಪದವನ್ನು ಸದಾ ಸಾರುವ ಮಲೆನಾಡು ಇಂದು ಕೃಷಿ ಸಂತುಷ್ಟಿಗಾಗಿ ಮತ್ತು ಸ್ಥಳೀಯ ಪರಂಪರೆಯ ಪಸರಣಕ್ಕೆ ಇದು ಸಾಕ್ಷಿಯಾಗಲಿದೆ.
ಶಿವಮೊಗ್ಗ ಕಂಬಳದ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರು ಕೆ.ಎಸ್. ಈಶ್ವರಪ್ಪ,ಅಧ್ಯಕ್ಷರು ಮುಚೂರು ಕಲ್ಕುಡೆ ಲೋಕೆಶ್ ಶೆಟ್ಟಿ, ಮುಖ್ಯ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ವಿಸ್, ಕಾರ್ಯಧ್ಯಕ್ಷರು ಕಾಂತೇಶ್ ಕೆ.ಇ,ಜಿಲ್ಲಾ ಕಂಬಳ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು,ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ 3181 ಮತ್ತು 3182 ಇವರುಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆ ಯಿಂದ ನಡೆಯಲಿದೆ.
ಈ ಕಾರ್ಯಕ್ರಮದ ಯಶಸ್ವಿಯಾಗಿ ನಡೆಯಲಿ ಎಂದು ಪೊಳಲಿ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಸಾರ್ವಜನಿಕವಾಗಿ ಪ್ರಾರ್ಥನೆಯನ್ನು ಇಂದು ಸಲ್ಲಿಸಿ ಚಾಲನೆಯನ್ನು ನೀಡಲಾಯಿತು , ಈ ಸಂದರ್ಭದಲ್ಲಿ ಸಿದ್ದಕಟ್ಟೆ ಕೊಡಂಗೆ ಕಂಬಳದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯದರ್ಶಿ ಶಶಿಧರ ಶೆಟ್ಟಿ, ಕೋಶಾಧಿಕಾರಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು,















