ಉಪ್ಪಿನಂಗಡಿ :ಹಿಂದೂ ಸಂಘಟನೆ ಕಾರ್ಯಕರ್ತ ಅಶೋಕ್ ಶೆಟ್ಟಿ ಎಂಬವರಿಗೆ ಸೇರಿದ ಮೀನಿನ ಅಂಗಡಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿರವ ಘಟನೆ ಉಪ್ಪಿನಂಗಡಿ ಹಳೇಗೇಟು ಬಳಿ ನಡೆದಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ ಭೇಟಿ ನೀಡಿ ಹಿಂದೂ ಯುವಕನ ಅಂಗಡಿಗೆ ಬೆಂಕಿ ಕೊಟ್ಟ ದುಷ್ಕೃತ್ಯವನ್ನು ಖಂಡಿಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿದರು.
ತುರ್ತಾಗಿ ನೂತನ ಅಂಗಡಿ ಪ್ರಾರಂಭ ಮಾಡಲು ಬೇಕಾಗುವ ವ್ಯವಸ್ಥೆ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿ
ಧನ ಸಹಾಯ ಮಾಡಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಬಜರಂಗದಳ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು,ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಕಾರ್ಯದರ್ಶಿ ಪ್ರಸಾದ್ ಪಚ್ಚಾಡಿ, ಬಜರಂಗದಳದ ಪ್ರಮುಖರಾದ ರವಿನಂದನ್ ನೆಟ್ಟಿಬೈಲು, ಕಿಶನ್ ಕಾಂಚನ, ಜಯಂತ್ ಕುಂಜೂರುಪಂಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು















