ಬಂಟ್ವಾಳ :ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರಕಲಾ ವೃಂದ (ರಿ) ಮತ್ತು ನೇತ್ರಾವತಿ ಮಾತೃ ಮಂಡಲಿ ನೆತ್ತರಕೆರೆ ಇದರ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಎನ್ ಎಂ ಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಮಾ26ರಂದು ಆದಿತ್ಯವಾರ ಲಚ್ಚಿಲ್ ಮೈದಾನದಲ್ಲಿ ನಡೆಯಲಿದೆ.
ಸಂಘದ ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಈ ಪಂದ್ಯಾಟದಲ್ಲಿ ಎನ್ ಎಂ ಸಿ ಕ್ರಿಕೆಟರ್ಸ್, ಎನ್ ಎಂ ಸಿ ಈಗಲ್, ಎನ್ ಎಂ ಸಿ ಸ್ಟ್ರೈಕರ್, ಎನ್ ಎಂ ಸಿ ವಾರಿಯರ್, ಎನ್
ಎಂ ಸಿ ಸೂಪರ್ ಕಿಂಗ್ಸ್, ಎನ್ ಎಂ ಸಿ ನೈಟ್ ರೈಡರ್ಸ್ ಎಂಬ 6 ತಂಡಗಳು ಭಾಗವಹಿಸುತ್ತಿದ್ದು,ಪ್ರತಿ ಪಂದ್ಯವು 3 ಓವರ್ ಗಳಿಂದ ಕೂಡಿದ್ದು ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ .ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














