ಬಂಟ್ವಾಳ: ಜಗತ್ತಿಗೆ ಒಳಿತನ್ನು ಬಯಸುವ ಧರ್ಮ ನಮ್ಮದು,ಪ್ರಸ್ತುತ ವರ್ತಮಾನ ಹಿಂದೂ ಧರ್ಮದ ಪುನರುತ್ಥಾನದ ಕಾಲ. ಸಾಧು ಸಂತರ ಹೋರಾಟದ ಫಲವಾಗಿ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಗಟ್ಟಿಯಾಗಿ ನೆಲೆ ನಿಂತಿದೆ. ಹಿಂದೂ ಸಮಾಜ ಎಂಬುದು ಅಕ್ಷಯ ವಟ ವೃಕ್ಷ, ಹಿಂದೂ ಸಮಾಜವನ್ನು ದಮನ ಮಾಡಿದಷ್ಟು ಸಿಡಿಗುಂಡಾಗಿ ಪರಿಣಮಿಸುತ್ತದೆ,ನಮ್ಮಲ್ಲಿನ ಜಾತಿ, ಪಂಗಡಗಳನ್ನು ಮೆಟ್ಟಿನಿಂತು ನಾವೆಲ್ಲರೂ ಹಿಂದೂ ಎನ್ನುವ ಬಾಂದವ್ಯದಿಂದ ದೇಶ ಕಟ್ಟೋಣ.ಹನುವ ದೇವಸ್ಥಾನದ ಮೂಲಕ ಸಂಸ್ಕಾರ ಹಾಗೂ ಧಾರ್ಮಿಕ ಶಿಕ್ಷಣ ಸಮಾಜಕ್ಕೆ ಸಿಗಲಿ, ಈ ಕ್ಷೇತ್ರವು ಹಿಂದೂ ಸಮಾಜದ ಶಕ್ತಿ ಕೇಂದ್ರವಾಗಿ ಬೆಳಗಲಿ ಎಂದು ಪ್ರಖರ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.
ಅವರು ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜ.21ರಿಂದ 26ರ ವರೆಗೆ ನಡೆಯುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 2ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವಿತ್ತು,ತುಳುನಾಡು ಪುಣ್ಯ ಭೂಮಿ, ಧರ್ಮವನ್ನೆ ಅವತಾರವೆತ್ತಿ ಬಂದವರು ಶ್ರೀರಾಮ, ಧಾರ್ಮಿಕ ಶ್ರದ್ದೆ ಕೇಂದ್ರವು ನಮಗೆ ಜೀವನೋತ್ಸಾಹವನ್ನು ನೀಡುತ್ತದೆ. ರಾಮನ ತ್ಯಾಗ ಹನುಮನ ಸೇವೆ ನಮಗೆ ಆದರ್ಶವಾಗಲಿ ರಾಮನ ನಡೆ,ಕೃಷ್ಣ ನುಡಿ ನಮಗೆ ಜೀವಾಳ.ಹನುಮನ ಅನುಗ್ರಹದಿಂದ ದೇವಸ್ಥಾನ ನಿರ್ಮಾಣವಾಗಿದೆ. ಭಕ್ತಿಯು ವೃದ್ಧಿಯಾಗಿ ಸರ್ವರಿಗೂ ಸನ್ಮಂಗಳವಾಗಲಿ ಎಂದು ಹೇಳಿದರು
ವೇದಿಕೆಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಆಡಳಿತ ಮುಕ್ತಸರರು ಡಾ ಮಂಜಯ್ಯ ಶೆಟ್ಟಿ ,ಧಾರ್ಮಿಕ
ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ನೀರುಮಾರ್ಗ,ಭಂಡಾರಿ ಬಿಲ್ಡರ್ಸ್ ನ ಮ್ಯಾನ್ಯಜಿಂಗ್ ಡೈರೆಕ್ಟರ್ ಲಕ್ಷ್ಮೀಶ ಭಂಡಾರಿ, ದೇವಸ್ಥಾನದ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು,ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಆಳ್ವ ಕಂಪ, ಪ್ರಧಾನ ಸಂಚಾಲಕ ದೇವಸ್ಯ ಪ್ರಕಾಶ್ ಚಂದ್ರ ರೈ, ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು ಉಪಸ್ಥಿತರಿದ್ದರು.
ವೇದಿಕೆ ಸಮಿತಿಯ ಸಂಚಾಲಕ ಜಗದೀಶ ಕಡೆಗೋಳಿ ಸ್ವಾಗತಿಸಿ, ಪ್ರಚಾರ ಸಮಿತಿಯ ಸಹಸಂಚಾಲಕ ಸಂತೋಷ್ ಕುಲಾಲ್ ನೆತ್ತರಕೆರೆ ಧನ್ಯವಾದವಿತ್ತರು.
ಬಳಿಕ ನಡೆದ ಶ್ರೀ ರಾಮಕೃಷ್ಣ ಬಾಲಗೋಕುಲ ಮಲ್ಲೂರು ಇವರ ತುಳುನಾಡ ವೈಭವ ಹಾಗೂ ಸುಪ್ರಸಿದ್ದ ಗಾಯಕ ಅಜಯ್ ವಾರಿಯರ್ ತಂಡದ ಭಕ್ತಿ ಭಾವ ಸಂಗಮ ಕಾರ್ಯಕ್ರಮವು ಜನ ಮೆಚ್ಚುಗೆ ಪಡೆಯಿತು.














